ಗಂಗಮ್ಮನಗುಡಿ ಪೊಲೀಸರಿಂದ ಬೈಕ್ ಕಳ್ಳನ ಬಂಧನ: 3.5 ಲಕ್ಷ ರೂ. ಮೌಲ್ಯದ 8 ಬೈಕ್ ಜಪ್ತಿ

ಬೆಂಗಳೂರು: ಮೋಜಿಗಾಗಿ ಬೈಕ್ ಕಳವು ಮಾಡುತ್ತಿದ್ದ ಯುವಕನನ್ನು ಗಂಗಮ್ಮಗುಡಿ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದ ತ್ಯಾಮಗೊಂಡ್ಲು ನಿವಾಸಿ ನವೀನ್ (25) ಬಂಧಿತ ಕಳ್ಳ. ಆರೋಪಿಯಿಂದ 3.5 ಲಕ್ಷ ರೂ. ಮೌಲ್ಯದ 8 ಬೈಕ್ ಜಪ್ತಿ ಮಾಡಲಾಗಿದೆ.

ಯಶವಂತಪುರ 1, ಬಾಗಲಗುಂಟೆ 2, ಪೀಣ್ಯ 3 ಹಾಗೂ ವಿದ್ಯಾರಣ್ಯಪುರ 1 ಸೇರಿ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಬಾಣಾವರ ನಿವಾಸಿ ವೆಂಕಟರಾಮರೆಡ್ಡಿ ಆ.8ರಂದು ಸಂಜೆ ಗಂಗಮ್ಮ ಗುಡಿಯ ವೈಮ್ಯಾಕ್ ಸರ್ಕಲ್ ಬಳಿ ಬೈಕ್ ನಿಲ್ಲಿಸಿ ತೆರಳಿದ್ದರು. ಸ್ವಲ್ಪ ಸಮಯದ ಬಳಿಕ ಬಂದಾಗ ಬೈಕ್ ಕಳ್ಳತನವಾಗಿತ್ತು. ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ನವೀನ್ ಮೋಜಿನ ಜೀವನ ಅಂಟಿಸಿಕೊಂಡಿದ್ದ. ಹಣವಿಲ್ಲದೇ ಇದ್ದಾಗ ನಕಲಿ ಕೀ ಬಳಸಿ ಬೈಕ್ ಕದಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *