ನಂಜನಗೂಡು: ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ ತಾಯಿ ಹಾಗೂ ಮಗನ ಮೇಲೆ ಹಲ್ಲೆ ಮಾಡಿ ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ. ಇದರಿಂದ ಮಹಿಳೆ ಗಾಯಗೊಂಡಿದ್ದು ಆಸ್ಪತ್ರೆ ದಾಖಲಾಗಿದ್ದಾರೆ.
ಚಾಮಲಾಪುರ ಹುಂಡಿ ಗ್ರಾಮದಲ್ಲಿ ಬುಧವಾರ ಘಟನೆ ನಡೆದಿದೆ. ಗ್ರಾಮದ ಚೆನ್ನಾಜಮ್ಮ ಅವರ ಮನೆಗೆ ಬೆಳ್ಳಂಬೆಳಗ್ಗೆ ಹಣ ವಸೂಲಾತಿಗೆ ಬಂದ ಖಾಸಗಿ ಫೈನಾನ್ಸ್ ನೌಕರ ಆಕೆಗೆ ಬೆದರಿಕೆ ಹಾಕಿದ್ದಾನೆ. ಕಳೆದ ವರ್ಷ 54 ಸಾವಿರ ರೂ.ಗಳನ್ನು ಫೈನಾನ್ಸ್‌ನಿಂದ ಸಾಲ ಪಡೆದಿದ್ದರು. ಪ್ರತಿ ತಿಂಗಳು 2,470 ರೂ. ಪಾವತಿಸಬೇಕಿತ್ತು. ಈಗಾಗಲೇ 11 ಕಂತುಗಳನ್ನು ಕಟ್ಟಿದ್ದಾರೆ. ಉಳಿದ ಒಂಬತ್ತು ಕಂತುಗಳು ಬಾಕಿ ವಸೂಲಾತಿಗೆ ಬಂದ ಫೈನಾನ್ಸ್ ನೌಕರನಿಗೆ ಚೆನ್ನಾಜಮ್ಮ ಸಮಯಾವಕಾಶ ಕೊಡುವಂತೆ ಕೇಳಿದ್ದಾರೆ. ಆದರೆ ಕಾಲಾವಕಾಶ ನೀಡಲು ಒಪ್ಪದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಗ ಮಧ್ಯ ಪ್ರವೇಶಿಸಿದಾಗ ತಳ್ಳಾಟ ನೂಕಾಟ ನಡೆದಿದೆ. ಈ ವೇಳೆ ಚೆನ್ನಾಜಮ್ಮ ಕೆಳಗೆ ಬಿದ್ದು ಗಾಯಗೊಂಡರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.