ವಿಜಯವಾಣಿ ಸುದ್ದಿಜಾಲ ಕೋಲಾರ
ಗ್ರಾಮಾಂತರ ಪ್ರದೇಶ ಬಡ ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ಸಾಧ್ಯವಾಗದೆ ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಮಲಬಾರ್ ಅಂತಹ ಕಂಪನಿಯು ತನ್ನ ಸಿ.ಎಸ್.ಆರ್ ಅನುದಾನವನ್ನು ವಿದ್ಯಾರ್ಥಿವೇತನದ ಮೂಲಕ ಅನುಕೂಲ ಮಾಡಿಕೊಟ್ಟಿದ್ದಾರೆ ಇದರ ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಭಾನುವಾರ ಮಲಬಾರ್ ಸಂಸ್ಥೆಯ ವತಿಯಿಂದ ಸಿ.ಎಸ್.ಆರ್. ಅನುದಾನದಡಿ ಸುಮಾರು ಜಿಲ್ಲೆಯ ೭೨೧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ೬೧.೬೬ ಲಕ್ಷ ರೂಗಳ ವಿದ್ಯಾರ್ಥಿವೇತನವನ್ನು ವಿತರಿಸಿ ಮಾತನಾಡಿ ಸಮಾಜದಲ್ಲಿ ಬದಲಾವಣೆ ಶಿಕ್ಷಣದಿಂದ ಮಾತ್ರವೇ ಸಾಧ್ಯವಾಗುತ್ತದೆ ಕೇವಲ ಆಸ್ತಿ ಮಾಡಿದರೆ ಸಾಲದು ಇಂತಹ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಬೇಕು. ಮಲಬಾರ್ ಸಂಸ್ಥೆಯ ಸಹಾಯಹಸ್ತವು ಶಿಕ್ಷಣಕ್ಕೆ ಹೆಚ್ಚಿನ ಅಧ್ಯತೆ ಇರಲಿ ನಿಮ್ಮ ಜೊತೆಗೆ ಸದಾ ನಾವು ಎಲ್ಲರೂ ಇರತ್ತೇವೆ ಎಂದರು.
ಜಿಲ್ಲೆಯ ಕೋಲಾರ, ಬಂಗಾರಪೇಟೆ, ಮಾಲೂರು, ಮಾಸ್ತಿ, ಮುಳಬಾಗಿಲು ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿಯರಿಗೆ ಒಟ್ಟು ೬೧ ಲಕ್ಷ ೬೬ ಸಾವಿರ.ವಿದ್ಯಾರ್ಥಿವೇತನ ನೀಡಿದ್ದಾರೆ. ಇದೊಂದು ಒಳ್ಳೆಯ ಕೆಲಸವಾಗಿದೆ ವಿದ್ಯಾರ್ಥಿಗಳು ಸಮಾಜದ ಆಸ್ತಿ ಏನೂ ಇಲ್ಲದ ಸಮಯದಲ್ಲಿ ಅಂಬೇಡ್ಕರ್ ೫೪ ಪದವಿ ಮಾಡಿದ್ದರು. ಈಗ ಎಲ್ಲಾ ಸೌಲಭ್ಯ ಇರುವ ನೀವು ಕನಿಷ್ಠ ೧೦ ಡಿಗ್ರಿಯಾದರೂ ಮಾಡಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಸಮಾಜದ ಅಭಿವೃದ್ಧಿಗೆ ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷಿಸಲು ಆಗುವುದಿಲ್ಲ ಖಾಸಗಿ ಕಂಪನಿಗಳ ಲಾಭಾಂಶವನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಹೆಣ್ಣು ಮಕ್ಕಳು ಸಹ ಎಲ್ಲಾ ವಿಭಾಗದಲ್ಲಿ ನಿಭಾಯಿಸುವ ಶಕ್ತಿ ಮತ್ತು ಅವಕಾಶಗಳು ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಜೊತೆಗೆ ಸರ್ಕಾರವು ರಾಜಕೀಯದಲ್ಲಿ ಸಹ ಮಹಿಳಾ ಮೀಸಲಾತಿ ಜಾರಿ ಮಾಡಿದ್ದು ಮುಂದೆ ಜಾರಿಯಾಗಲಿದೆ. ಗುರಿ ಮತ್ತು ಯಶಸ್ಸು ನಿಮ್ಮ ಅಧ್ಯತೆಯಾಗಬೇಕು ಎಂದರು.
ಮಲಬಾರ್ ಜೋನಲ್ ಮುಖ್ಯಸ್ಥ ಶರಿಪುದ್ದೀನ್ ಮಹಿಳಾ ಸಬಲೀಕರಣ ಉದ್ದೇಶದಿಂದ ಸರ್ಕಾರಿ ಕಾಲೇಜು ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ದೇಶದ ೨೧ ಸಾವಿರ ಮಕ್ಕಳಿಗೆ ರಾಜ್ಯದ ೫,೫೦೧ ಮಕ್ಕಳಿಗೆ ಸೌಲಭ್ಯಗಳನ್ನು ನೀಡಲಾಗಿದೆ. ಕೋಲಾರ ಜಿಲ್ಲೆಯ ೨೫ ಕಾಲೇಜುಗಳ ೭೨೪ ಮಕ್ಕಳಿಗೆ ೬೧ ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ನೀಡಿದ್ದೇವೆ. ಆದಾಯದ ಶೇ ೫ರಷ್ಟು ಹಣ ಸಿ.ಎಸ್.ಆರ್ ಅನುದಾನದಲ್ಲಿ ನೀಡಲಾಗಿದೆ. ಸಂಸ್ಥೆಯು ಶಿಕ್ಷಣ ಜೊತೆಗೆ ಹಸಿವು ಮುಕ್ತ ಭಾರತ, ಅಜ್ಜಿಮನೆ, ಮಾನವೀಯ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು,
ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಬಾಲಕೃಷ್ಣ, ಬಂಗಾರಪೇಟೆ ಪಿಯು ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ, ಮಲಬಾರ್ ಸಂಸ್ಥೆಯ ಅಲ್ತಾಫ್, ಸಾಧಿಕ್ ಮುಂತಾದವರು ಇದ್ದರು,
ಚಿತ್ರ ೧೬ ಕೆ.ಎಲ್.ಆರ್. ೦೬ ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಭಾನುವಾರ ಮಲಬಾರ್ ಸಂಸ್ಥೆಯ ವತಿಯಿಂದ ಸಿ.ಎಸ್.ಆರ್. ಅನುದಾನದಡಿ ಸುಮಾರು ಜಿಲ್ಲೆಯ ೭೨೧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ೬೧.೬೬ ಲಕ್ಷ ರೂಗಳ ವಿದ್ಯಾರ್ಥಿವೇತನವನ್ನು ಶಾಸಕ ಕೊತ್ತೂರು ಮಂಜುನಾಥ್ ವಿತರಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮುಂತಾದವರಿದ್ದರು.