ಹೊಸಪೇಟೆ: ಖಾಯಂ ಆಡಳಿತ ಸಿಬಂದಿಗೆ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಕನ್ನಡ ವಿವಿಯ ಕ್ರಿಯಾಶಕ್ತಿ ಮುಂದೆ ಭೋಧಕೇತರ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿ ಕುಲಪತಿ ಡಾ.ಪರಮಶಿವಮೂರ್ತಿಗೆ ಮನವಿ ಸಲ್ಲಿಸಿದರು.
ಕನ್ನಡ ವಿವಿ ನೌಕರರಿಗೆ ಮುಂಬಡ್ತಿ ನೀಡದೇ ವಿನಾಕಾರಣ ವಿಳಂಭನೀತಿ ಅನುಸರಿಸುತ್ತಿದೆ. ಆಡಳಿತ ಸಿಬ್ಬಂದಿಗಳ ನ್ಯಾಯಬದ್ಧ ಸೌಲಭ್ಯವಾದ ಮುಂಬಡ್ತಿ ಪ್ರಕ್ರಿಯೆಯನ್ನು ಆರಂಭಿಸುವವರೆಗೆ ಆಡಳಿತ ಸಿಬ್ಬಂದಿಗಳು ಹೋರಾಟವನ್ನು ಮುಂದುರೆಸುತ್ತೇವೆ.ವಿವಿಯಲ್ಲಿ ನೌಕರರು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಾಗಿರುವುದು ವಿಪರ್ಯಾಸವಾಗಿದೆ ಎಂದು ಆಗ್ರಹಿಸಿದರು.
ನೌಕರರ ಬೇಡಿಕೆಯಂತೆ ಇಲಾಖಾ ಮುಂಬಡ್ತಿ ಸಮಿತಿ ಸಭೆ ತುರ್ತಾಗಿ ಕರೆದು ಸೇವಾ ಹಿರಿತನ ಹೊಂದಿದ ನೌಕರರಿಗೆ ಸರ್ಕಾರದ ಆದೇಶಗಳು ಮತ್ತು ಮೀಸಲಾತಿಯ ಅನುಗುಣವಾಗಿ ಮುಂಬಡ್ತಿಯನ್ನು ನೀಡಬೇಕು ಎದು ಒತ್ತಾಯಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಕುಲಪತಿ ಡಾ.ಪರಮಶಿವಮೂರ್ತಿ ನವಿ ಸವೀಕರಿಸಿ 10 ದಿನಗಳೊಳಗಾಗಿ ಆಡಳಿತ ಸಿಬ್ಬಂದಿಯವರಿಗೆ ಮುಂಬಡ್ತಿಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ನ.22ರವರೆಗೆ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಿದರು.
ಪ್ರಮುಖರಾದ ಜಿ.ಶಿವಕುಮಾರ್, ಗ್ಯಾನಪ್ಪ ಬಡಿಗೇರ, ಎಲ್.ನಾರಾಯಣ, ಎಚ್.ಶ್ರೀನಿವಾಸ್, ಗಂಡಿ ಬೋರಯ್ಯ, ಕಾಳಪ್ಪ ಬಡಿಗೇರ, ಸಿ.ಬಸವರಾಜ, ಹನುಮೇಶ ಪತ್ತಾರ, ಸಿ.ವಾಗೀಶ, ಬಿ.ಉಮಾಪತಿ, ಆರ್.ವಿ.ದೇಶಪಾಂಡೆ ಇತರರಿದ್ದರು.