ಖಾನಾಪುರ ಗ್ರಾಪಂ ಅವ್ಯವಹಾರ ತನಿಖೆ ನಡೆಸಿ

blank

ಯಾದಗಿರಿ: ಶಹಾಪೂರ ತಾಲೂಕಿನ ಖಾನಾಪುರ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಕಾರ್ಮಿಕರ ವೇದಿಕೆ ಜಿಲ್ಲಾ ಘಟಕದಿಂದ ಮಂಗಳವಾರ ಇಲ್ಲಿನ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.

ಖಾನಾಪೂರ ಗ್ರಾಪಂ ವ್ಯಾಪ್ತಿಯಲ್ಲಿ 2021-22 ನೇ ಸಾಲಿನ ಡಾ.ಅಂಬೇಡ್ಕರ್ ವಸತಿ ಯೋಜನೆಯಡಿ 20 ಮನೆಗಳು, ಬಸವ ವಸತಿ ಯೋಜನೆಯಡಿ 62 ಒಟ್ಟು 82 ಮನೆಗಳು ಬಂದಿದ್ದು, ಯಾವುದೇ ವಾಡರ್್ ಸಭೆ, ಗ್ರಾಮಸಭೆ ನಡೆಸಿರುವುದಿಲ್ಲ, ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ತಮ್ಮ ಕುಟುಂಬದವರಿಗೆ ಹಾಗೂ ಅನುಕೂಲಸ್ಥರಿಗೆ ಆಯ್ಕೆ ಮಾಡಿದ್ದಾರೆ. ಇದರಿಂದ ಬಡ ಫಲಾನುಭವಿಗಳು ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಪದಾಧಿಕಾರಿಗಳು ಆರೋಪಿಸಿದರು.

ಬಡವರಿಗೆ ಮಂಜೂರಾದ ಮನೆಯಲ್ಲಿ ಒಬ್ಬರಿಂದ 30 ಸಾವಿರ ರೂ.ಹಣ ಪಡೆದುಕೊಳ್ಳಲಾಗಿದೆ. ಒಟ್ಟು 82 ಮನೆಗಳಿಗೆ ರಾತ್ರೋರಾತ್ರಿ ಜಿಪಿಎಸ್ ಮಾಡಿ, ಭಾರಿ ಅವ್ಯವಹಾರ ನಡೆಸಿ ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಬಡ ಕೂಲಿಕಾರರು ಕಾರ್ಯನಿರ್ವಹಿಸಿದ್ದು, ಅವರಿಗೆ ಬಳಸುವ ಸಾಮಾಗ್ರಿಗಳು ಖರೀದಿಸದೆ ಬಂದ 5.20 ಲಕ್ಷ ರೂ.ಅಧ್ಯಕ್ಷರು, ಪಿಡಿಓ ಮತ್ತು ಅಪರೇಟರ್ ದುರ್ಬಳಕೆ ಮಾಡಿಕೊಂಡಿದ್ದು

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…