ಖಲೀದಾ ಜಿಯಾಗೆ ಜಾಮೀನು

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾಗೆ ಜಾಮೀನು ನೀಡಲಾಗಿದ್ದು, ಜೈಲಿನಿಂದ ಹೊರಬರಲಿದ್ದಾರೆಂದು ಅವರ ಪರ ವಕೀಲರು ಮಾಹಿತಿ ನೀಡಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಜಿಯಾಗೆ ನ್ಯಾಯಾಲಯ ನಾಲ್ಕು ತಿಂಗಳ ಮಧ್ಯಂತರ ಜಾಮೀನು ನೀಡಿದೆ ಎಂದು ವಕೀಲ ಝೈನುಲ್ ಅಬೆದಿನ್ ಹೇಳಿದ್ದಾರೆ. ಜೈಲು ಸೇರಿದ ಒಂದು ತಿಂಗಳ ಬಳಿಕ ಜಿಯಾಗೆ ಜಾಮೀನು ಸಿಕ್ಕಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *