ಖರ್ಗೆ ಸೋಲಿನ ಭೀತಿಯಿಂದ ರಾಹುಲ್ ಆಗಮನ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲುತ್ತಾರೆ ಎಂಬ ಭೀತಿಯಿಂದಲೇ 18ರಂದು ರಾಹುಲ್ ಗಾಂಧಿ ಕಲಬುರಗಿಗೆ ಆಗಮಿಸಿ ಪ್ರಚಾರ ಮಾಡಲು ಬರುತ್ತಿರುವಂತಿದೆ ಎಂದು ಡಾ.ಉಮೇಶ ಜಾಧವ ಪ್ರತಿಕ್ರಿಯಿಸಿದರು.

ರಾಹುಲ್ ಬಂದು ಹೋದರೂ ಏನು ತೊಂದರೆಯಿಲ್ಲ. ಕಲಬುರಗಿ ಜನರು ಜಾಣರಿದ್ದಾರೆ. ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಸೋಲಿಸಲು ಜನರು ನಿಶ್ಚಯಿಸಿದ್ದಾರೆ. ಪರಿಣಾಮ ಈ ಸಲ ಕಲಬುರಗಿಯಲ್ಲಿ ಖರ್ಗೆ ಸೋಲಲಿದ್ದಾರೆ ಎಂದರು.

ಕಲಬುರಗಿ ವಾತಾವರಣ ಸರಿಯಾಗಿಲ್ಲ ಎಂಬ ಕಾರಣದಿಂದಲೇ ರಾಹುಲ್ ಗಾಂಧಿ ಬರುತ್ತಿದ್ದಾರೆ. ಖರ್ಗೆ ಶಕ್ತಿ ನೋಡಿದರೆ ಯಾವ ನಾಯಕರು ಬಂದು ಪ್ರಚಾರ ಮಾಡದೆ ಗೆಲ್ಲಬೇಕು. ಆದರೆ ರಾಷ್ಟ್ರೀಯ ಅಧ್ಯಕ್ಷರು ಬರುತ್ತಿದ್ದಾರೆ ಎಂದರೆ ಇದರರ್ಥವೇನು ಎಂದು ಪ್ರಶ್ನಿಸಿದರು.

ಇಲ್ಲಿನ ಪರಿಸ್ಥಿತಿ ರಾಹುಲ್ ಗಾಂಧಿಗೆ ಈಗ ಗೊತ್ತಾಗಿದೆ. ಹೀಗಾಗಿ ಕಲಬುರಗಿ ಬಿಟ್ಟು ಬೀದರ್, ಬಳ್ಳಾರಿ ಇನ್ನಿತರ ಕಡೆಗೆ ಹೋಗಬೇಕಾಗಿತ್ತು. ಬಿಜೆಪಿಯವರು ಬಂಜಾರ ಸಮುದಾಯದವರಿಗೆ ಟಿಕೆಟ್ ಕೊಡ್ತಿದ್ದಾರೆ. ಕಾಂಗ್ರೆಸ್ ನೀಡಿಲ್ಲ. ಆದರೆ, ಲಂಬಾಣಿ ಜನರ ಮತಗಳು ಮಾತ್ರ ಬೇಕೆಂದರೆ ಹೇಗೆ ಎಂದು ಡಾ.ಜಾಧವ ಪ್ರಶ್ನಿಸಿದರು.

ಚಿಂಚೋಳಿ ಕ್ಷೇತ್ರದ ಕಾಳಗಿ ದತ್ತು ತೆಗೆದುಕೊಳ್ಳುತ್ತಿನಿ ಅಂತ ಹಿಂದೆ ಅಂದಿದ್ದ ಸಚಿವ ಪ್ರಿಯಾಂಕ್ ಖಗರ್ೆ, ಈಗ ಚಿಂಚೋಳಿ ಜನರು ತಮ್ಮನ್ನೇ ದತ್ತು ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಹಾಗಿದ್ದರೆ ಚಿತ್ತಾಪುರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚಿಂಚೋಳಿಗೆ ಬಂದು ಚುನಾವಣೆಗೆ ನಿಂತು ಗೆದ್ದು ತೋರಿಸಲಿ.
| ಡಾ.ಉಮೇಶ ಜಾಧವ, ಲೋಕಸಭೆಯ ಬಿಜೆಪಿ ಸಂಭಾವ್ಯ ಅಭ್ಯರ್ಥಿ

Leave a Reply

Your email address will not be published. Required fields are marked *