ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂವಾದ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮುಂಬರುವ ಲೋಕಸಭಾ ಚುನಾವಣೆ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಂಗಿತ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಬುಧವಾರ ಸಂಜೆ ನಡೆದ ಸಂವಾದದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನರೇಂದ್ರ ಮೋದಿಯವರಿಗೆ ಖರ್ಗೆ ಮಾತಿನ ವೈಖರಿಯಿಂದ ನಡುಕ ಹುಟ್ಟಿದ್ದು, ಅವರ ತತ್ವ , ಸಿದ್ಧಾಂತ ಮತ್ತು ವಿಚಾರಧಾರೆಗಳಿಂದ ಬಿಜೆಪಿ ವಲಯದಲ್ಲಿ ಭಯ ಮನೆ ಮಾಡಿದೆ. ಈಗ ಪ್ರಧಾನಿ ಆಗಲು ಖರ್ಗೆ ಎಲ್ಲ ಅರ್ಹತೆ ಹೊಂದಿದ್ದಾರೆ. ಗಾಂಧಿ ಕುಟುಂಬದ ರಾಹುಲ್‌ಗಾಂಧಿಯವರೂ ದೇಶಕ್ಕೆ ದಲಿತ ಪ್ರಧಾನಿ ಮಾಡುವ ಆಸಕ್ತಿ ತೋರಿದ್ದಾರೆ. ಈ ಹಿಂದೆ ಪ್ರಧಾನಿಯಾಗುವ ಅರ್ಹತೆ ಇದ್ದರೂ ಸೋನಿಯಾಗಾಂಧಿ ಅವರು ಡಾ.ಮನಮೋಹನಸಿಂಗ್ ಅವರನ್ನು ಕರೆತಂದು ಪ್ರಧಾನಿ ಮಾಡಿದ್ದರು. ಹೀಗಾಗಿ ಖರ್ಗೆಯವರೂ ಪ್ರಧಾನಿಯಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂದರು.
ಇದನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕದಲ್ಲಿ ಪP್ಷÀದ ಕಾರ್ಯಕರ್ತರು ಪP್ಷÀ ಮತ್ತು ಖರ್ಗೆ ಅವರ ಕೈ ಬಲಪಡಿಸಲು ಸನ್ನದ್ಧರಾಗಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ೨೦-೨೫ ಸ್ಥಾನ ಗಳಿಸುವ ವಿಶ್ವಾಸವಿದೆ. ಪP್ಷÀದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪP್ಷÀ ಹೆಚ್ಚಿನ ಸ್ಥಾನ ಗೆದ್ದರೆ ಲೋಕಸಭಾ ಚುನಾವಣೆಗೆ ಹೋಗಲು ಹೆಚ್ಚಿನ ಬಲ ಬರಲಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ಅಂತಿಮಗೊAಡಿದ್ದು, ಶೀಘ್ರದ¯್ಲೆÃ ಪ್ರಕಟವಾಗುವ ಸಾಧ್ಯತೆ ಇದೆ. ಈಗಿನಿಂದಲೇ ಕಾರ್ಯಕರ್ತರು ಚುರುಕಿನಿಂದ ಕೆಲಸ ಮಾಡಲು ಮುಂದಾಗಬೇಕು ಎಂದರು.
ಶಾಸಕ ಬಿ.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಮಾಜಿ ಸಚಿವ ರೇವೂನಾಯಕ್ ಬೆಳಮಗಿ, ಪಕ್ಷದ ಮುಖಂಡ ಶಿವಾನಂದ ಪಾಟೀಲ್ ಮರತೂರ್, ಹೈ.ಕ.ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಅರುಣಕುಮಾರ ಪಾಟೀಲ್, ಮಾಜಿ ಮೇಯರ್ ಬಾಬು ಒಂಟಿ, ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲತಾ ರವಿ ರಾಠೋಡ್, ರೇಣುಕಾ ಸಿಂಗೆ, ಮಲ್ಲಿಕಾರ್ಜುನ ಪೂಜಾರಿ, ನ್ಯಾಯವಾದಿ ಮಹಾಂತೇಶ ಕೌಲಗಿ, ಮಜರ್ ಆಲಂ ಖಾನ್, ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ, ಲಿಂಗರಾಜ ತಾರಫೈಲ್ ಇತರರು ಇದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್ ಸ್ವಾಗತಿಸಿ, ನಿರೂಪಿಸಿದರು.
ಕೋಟ್
ಪP್ಷÀಕ್ಕಾಗಿ ದುಡಿದವರನ್ನು ಯಾವತ್ತೂ ಮರೆಯುವುದಿಲ್ಲ. ಮುಂಬರುವ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಮೂಲಕ ಪಕ್ಷ ಅವಕಾಶ ಒದಗಿಸಲಿದೆ. ದೇಶ ಉಳಿಯಲು ಕಾಂಗ್ರೆಸ್ ಪP್ಷÀದ ಅಗತ್ಯತೆ ಇದೆ. ಪP್ಷÀಕ್ಕೂ ಗಾಂಧಿ ಕುಟುಂಬದ ಅನಿವಾರ್ಯತೆ ಇದೆ.
ಕೆ.ಎನ್.ರಾಜಣ್ಣ,
ಸಹಕಾರ ಸಚಿವ.