More

    ಖಂಡಿಕೇರಿ ಹೆಸರಲ್ಲಿ ಮಹಾಡೋಣಗಾಂವ

    ಔರಾದ್: ಖಂಡಿಕೇರಿ ಗ್ರಾಮದ ನಾಗರಿಕರು ಸರ್ಕಾರದ ಸೌಲಭ್ಯ ಪಡೆಯಲು ನಾಡಕಚೇರಿಗೆ ಹೋದಾಗ ಅಲ್ಲಿನ ತಂತ್ರಾAಶದಲ್ಲಿ ಖಂಡಿಕೇರಿ ಗ್ರಾಮದ ಬದಲಾಗಿ ಮಹಾಡೋಣಗಾಂವ ಎಂದು ತೋರಿಸುತ್ತಿದೆ. ಇದರಿಂದ ಖಂಡಿಕೇರಿ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದ್ದು, ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಅವರಿಗೆ ಮನವಿ ಮಾಡಿದರು.

    ಪ್ರಸ್ತುತ ಸರ್ಕಾರದ ಸೌಲಭ್ಯ ಪಡೆಯಲು ಆನ್‌ಲೈನ್ ಪ್ರತಿ ಬೇಕು. ಇದಕ್ಕೆ ಔರಾದ್ ನಾಡಕಚೇರಿಗೆ ಅರ್ಜಿ ಸಲ್ಲಿಸಬೇಕು. ಆದರೆ ಖಂಡಿಕೇರಿ ಗ್ರಾಮ ಎಂದು ಅರ್ಜಿ ಅಪ್ಲೋಡ್ ಮಾಡುವಾಗ ಮಹಾಡೋಣಗಾಂವ್ ಎಂದು ತೋರಿಸುತ್ತಿದೆ. ಇದರಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

    ಶ್ರೀಧರ್ ಗಡದೆ, ಮಾರುತಿ ಗಡದೆ, ನರಸಿಂಗ್, ಶಿವಾಜಿ ಜಾಧವ್, ತ್ರಿಮುಖ ಸ್ವಾಮಿ, ರಮೇಶ ಪಾಟೀಲ್, ಲಕ್ಷö್ಮಣ, ಅಶೋಕ, ವಿಠ್ಠಲ್, ರಹೀಮ್ ಮೌಲಾಸಾಬ್, ಅನೀಲ್ ಭಾಲ್ಕೆ, ಕಾರ್ತಿಕ ಸ್ವಾಮಿ, ರಾಜಕುಮಾರ ಹುಲ್ಯಾಳೆ, ಬಸಪ್ಪ, ಸಂಜು, ಸಂತೋಷ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts