ಕಲಬುರಗಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಡಪದ ಸಮಾಜಕ್ಕೆ ಅವಹೇಳನಕಾರಿ ಮಾತು ಆಡಿದ್ದು, ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಈರಣ್ಣ ಹಡಪದ ಆಗ್ರಹಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಟೀಕಿಸುವ ಭರದಲ್ಲಿ ಮಧು ಬಂಗಾರಪ್ಪ ಕ್ಷೌರಿಕ ವೃತ್ತಿಯ ಬಗ್ಗೆ ಹಗುರವಾಗಿ ಮಾತನಾಡಿದ್ದು, ಹಡಪದ ಸಮಾಜಕ್ಕೆ ನೋವು ಉಂಟು ಮಾಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಟಿಂಗ್ ಮಾಡುವವರು ಫ್ರೀ ಇಲ್ಲ, ಅವರೇ ಕಟಿಂಗ್ ಮಾಡಲು ಬರಲಿ ಎಂಬ ಹೇಳಿಕೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕ್ಷೌರಿಕರು ಬಾಜಾ, ಭಜಂತ್ರಿ, ಆರತಿ ತೆಗೆದುಕೊಂಡು ಮನೆಗೆ ಹೋಗಿ ಕಟಿಂಗ್ ಮಾಡಬೇಕು ಎಂದು ಪ್ರಶ್ನಿಸಿದರು. ಅವರ ಹೇಳಿಕೆ ಕಾಯಕ ಸಮುದಾಯಗಳಿಗೆ ನೋವು ತಂದಿದೆ. ಕೂಡಲೇ ಸಿದ್ದರಾಮಯ್ಯನವರು ಅವರನ್ನು ಸಚಿವ ಸಂಪುಟದಿAದ ವಜಾಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು. ಭಗವಂತ ಹಡಪದ, ಸುನೀಲಕುಮಾರ, ರುಕ್ಮಣ್ಣ ಮಡಿವಾಳ, ಶರಣು ನಂದೂರ, ನಾಗರಾಜ ಮಡಿವಾಳ, ಬಸವರಾಜ ಸುಗೂರ ಇತರರಿದ್ದರು.