ಹಂಪಿ (ಹೊಸಪೇಟೆ): ಉದ್ಘಾಟನೆ ದಿನವೇ ಹಂಪಿ ಉತ್ಸವ ಆಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಹಂಪಿ ಉತ್ಸವ ಅಲ್ಲ ಇದು ಕಳ್ಳರ ಉತ್ಸವ. ಅನೇಕರು ತಮ್ಮ ಸ್ವಾರ್ಥಕ್ಕಾಗಿ ಹಂಪಿಯನ್ನು ಉಪಯೋಗಿಸಿಕೊಂಡಿದ್ದಾರೆ. ಈಗ ಮತ್ತೆ ಬಂದಿರುವವರಿಗೆ ಸ್ವಾಗತ. ಶೇಮ್ ಶೇಮ್ ಹಂಪಿ ಉತ್ಸವ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಹಂಪಿ ಪೌರಾಣಿಕ ಸ್ಥಳವಾಗಿದೆ. ಆದರೆ, ಕ್ಷೇತ್ರದ ಮಹಿಮೆ ಹೇಳುವ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡಿಲ್ಲ. ನಮ್ಮ ಸ್ವಂತ ವೆಚ್ಚದಲ್ಲಿ ಪಂಪಾಂಬಿಕ ಉತ್ಸವ, ಪುರಾಣ ಪ್ರವಚನಕ್ಕೆ ಅನುಮತಿ ನೀಡಬೇಕು. ಆದರೆ, ಸಚಿವರು, ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಕುರಿತು ಶ್ರೀ ಪಂಪಾ ಕ್ಷೇತ್ರ ಭಕ್ತಿನಗರ ಸಮಾಜ ಸಂಸ್ಥಾನಂ ಹೆಸರಿನಲ್ಲಿ ಕರಪತ್ರಗಳನ್ನು ಪ್ರಕಟಿಸಲಾಗಿದೆ.