More

  ಕ್ಷೇತ್ರದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅವಶ್ಯ

  ಇಟಗಿ: ಕೃಷಿ, ಕೈಗಾರಿಕೆ ಮತ್ತು ನೀರಾವರಿ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಕ್ಷೇತ್ರದ ಜನತೆಯ ಸಹಕಾರ ಅವಶ್ಯವಾಗಿದೆ ಎಂದು ಮಲಪ್ರಭಾ ಸಕ್ಕರೆ ಕಾರ್ಖಾನೆ ಚೇರ್ಮನ್ ನಾಸಿರ್ ಬಾಗವಾನ್ ಹೇಳಿದರು. ಸ್ಥಳೀಯ ಸಾಯಿನಾಥ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ನಿಮಿತ್ತ ಸೋಮವಾರ ಜರುಗಿದ 3ನೇ ದಿನದ ಧರ್ಮ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ವಧರ್ಮ ಸಮಾನತೆಗೆ ಸಾಯಿಬಾಬಾ ಅವರ ತತ್ತ್ವಾದರ್ಶಗಳು ಆದರ್ಶವಾಗಿವೆ ಎಂದರು. ಬೆಳಗಾವಿ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಜಗದೀಶಗೌಡ ಪಾಟೀಲ ಮಾತನಾಡಿ, ಮಹಾತ್ಮರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು. ಭೂದಾನಿ ಗಂಗವ್ವ ನಿಂಗಪ್ಪ ಕುರುಬರ ಹಾಗೂ ನಾಸಿರ್ ಬಾಗವಾನ್ ಅವರನ್ನು ಸತ್ಕರಿಸಿಲಾಯಿತು. ಪಾರಿಶ್ವಾಡದ ಗುರುಸಿದ್ದಯ್ಯ ಕಲ್ಮಠ ಸ್ವಾಮೀಜಿ ಸಾಯಿಬಾಬಾ ಜೀವನ ಚರಿತ್ರೆ ಕುರಿತು ಪ್ರವಚನ ನೀಡಿದರು. ಕರಿಕಟ್ಟಿಯ ಅದೃಶ್ಯಪ್ಪ ಗರಗದ, ರುದ್ರಪ್ಪ ಹೂಗಾರ ಅವರಿಂದ ವಚನ ಸಂಗೀತ, ನಂದಗಡದ ನಜಾಕತ್‌ಅಲಿ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಈರಣ್ಣ ಲಂಗೋಟಿ, ಬಸನಗೌಡ ಪಾಟೀಲ, ಶಿವಮೂರ್ತಿ ಗಾಳಿಮಠ, ಉದಯ ಲಂಗೋಟಿ, ಸುರೇಶ ಕುರುಬರ, ಕಮಿಟಿ ಅಧ್ಯಕ್ಷ ಶಂಕರ ಶೀಲಿ, ಉಪಾಧ್ಯಕ್ಷ ಬಸವರಾಜ ಶೀಲಿ, ಕಾರ್ಯದರ್ಶಿ ಮಡಿವಾಳಪ್ಪ ಕಡಕೋಳ, ಖಜಾಂಚಿ ರಾಜೇಂದ್ರ ಕುರುಬರ ಹಾಗೂ ಸುಭಾಷ ಕಿಳೋಜಿ, ವಿಠ್ಠಲ ಪದ್ಮಪ್ಪನವರ, ಚಂದ್ರಶೇಖರ ಕುರುಬರ, ಈರಣ್ಣ ಕಾದ್ರೊಳ್ಳಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts