ಯಾದಗಿರಿ: ಗುರುಮಠಕಲ್ ಕ್ಷೇತ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದವರ ಬಗ್ಗೆ ನಾನು ಆರೋಪ ಮಾಡುವುದಿಲ್ಲ. ಕ್ಷೇತ್ರಕ್ಕೆ ಮುಂದೆ ಏನು ಬೇಕು ಎಂಬ ನಿಟ್ಟಿನಲ್ಲಿ ಆಲೋಚನೆ ಹೊಂದಿದ್ದೇನೆ ಎಂದು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ತಿಳಿಸಿದರು.
ಇಲ್ಲಿನ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಗೌಡಗೇರಾ ಗ್ರಾಮಸ್ಥರನ್ನು ಪಕ್ಷ ಸೇರ್ಪಡೆಗೊಳಿಸಿ ಮಾತನಾಡಿ, ಕಳೆದ 5 ವರ್ಷಗಳಿಂದ ನಮ್ಮ ತಂದೆ, ಶಾಸಕ ನಾಗನಗೌಡ ಕಂದಕೂರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾನೂ ಸಹ ಜನಸೇವೆಯಲ್ಲಿ ನಿರತನಾಗಿದ್ದೇನೆ. ಚುನಾವಣೆಗಳು ಬಂದಾಗ ರಾಜಕೀಯ ಮಾಡೋಣ. ಆದರೆ ಅಭಿವೃದ್ಧಿ ಒಂದೇ ನಮ್ಮ ಗುರಿ ಎಂದರು.
ಹಿಂದೆ ಸಮ್ಮಿಶ್ರ ಸಕರ್ಾರದ ಅವಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಣ್ಣ, ಕ್ಷೇತ್ರಕ್ಕೆ ಕೋಟ್ಯಾಂತರ ರೂ.ಅನುದಾನ ಒದಗಿಸಿದ್ದರು. ಆದರೆ ಸಕರ್ಾರ ಬಹಳ ದಿನ ಉಳಿಯದ ಕಾರಣ ನಾವು ಅಂದುಕೊಂಡ ಕೆಲಸ ಮಹತ್ವದ ಯೋಜನೆಗಳು ಪೂರ್ಣಗೊಳಿಸಲು ಆಗಿಲ್ಲ. ಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮದ ಮಲ್ಲಯ್ಯ, ಹುಸೆನಪ್ಪ, ಸಿದ್ದಯ್ಯ, ಸಾಹೇಬಗೌಡ, ಮಲ್ಲೇಶ, ಹುಲಗಪ್ಪ, ಮಲ್ಲಿಕಾಜರ್ುನ, ಮರೆಪ್ಪ, ಶರಣಪ್ಪ, ಅಯ್ಯಪ್ಪ ಮಲ್ಲಿಕಾಜರ್ುನ, ಬಸಲಿಂಗಪ್ಪ, ಮೌನೇಶ ಕಲಾಲ್, ಹಣಮಂತ, ಸುರೇಶ, ಸಾಬಯ್ಯ ಕಲಾಲ್, ಮಾಳಪ್ಪ, ದೇವಪ್ಪ, ಮಾರೆಪ್ಪ, ಮಲ್ಲಯ್ಯ ಮುಂತಾದವರು ಪಕ್ಷ ಸೇರ್ಪಡೆಯಾದರು.