ಸಿನಿಮಾ

ಕ್ಷೇತದ ಋಣ ತೀರಿಸಲು ಮತ್ತೊಮ್ಮೆ ಆಶೀರ್ವದಿಸಿ

ಮೂಗೂರು: ಕ್ಷೇತದ ಜನರ ಋಣ ತೀರಿಸಲು ಕಳೆದ ಚುನಾವಣೆಯಂತೆ ಈ ಬಾರಿಯೂ ನನ್ನನ್ನು ಆಶೀರ್ವದಿಸಬೇಕು ಎಂದು ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಮತದಾರರಲ್ಲಿ ಮನವಿ ಮಾಡಿದರು.


ಮತಯಾಚನೆಗೆ ಮೂಗೂರು ಗ್ರಾಮಕ್ಕೆ ಆಗಮಿಸಿದ ವೇಳೆ ಪಕ್ಷದ ಸಾವಿರಾರು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಎಂ.ಅಶ್ವಿನ್ ಕುಮಾರ್, ಕಳೆದ 5 ವರ್ಷ ಕ್ಷೇತ್ರದ ಜನತೆ ತೋರಿದ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯಲಾಗದು. ಮುಂದಿನ ದಿನಗಳಲ್ಲಿ ನೀರೀಕ್ಷೆಗೂ ಮೀರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತಮ್ಮೆ ಅವಕಾಶ ಕಲ್ಪಿಸಿಕೊಡಬೇಕು. ಜೆಡಿಎಸ್ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದ ಯೋಜನೆಗಳು ರೈತರ ಪರವಾಗಿವೆ. ರೈತರು, ಸಾಮಾನ್ಯ ಜನತೆ ಬದುಕು ಉತ್ತಮವಾಗಲು ಎಚ್.ಡಿ.ಕುಮಾರಣ್ಣಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ ಹುಂಡಿ ಚಿನ್ನಸ್ವಾಮಿ ಮುಖಂಡರಾದ ಗೌಡರ ನಾಗರಾಜು, ಎಂ.ಚಂದ್ರ ಶೇಖರ್, ಎಂ.ಆರ್.ಸೋಮಣ್ಣ, ಎಂ.ಕೆ.ಸಿದ್ಧರಾಜು, ಎಂ.ಆರ್.ಸುಂದರ್, ಎಂ.ಪಿ.ಮರಿಸ್ವಾಮಿ, ಪುಟ್ಟಮಾದಯ್ಯ, ಪ್ರಭುಸ್ವಾಮಿ, ಜಯಶಂಕರ ಮೂರ್ತಿ, ಮಹದೇವಸ್ವಾಮಿ, ಕುರುಬೂರು ವೀರೇಶ್, ನಾಗರಾಜು, ಜಗಪತಿ, ಕೊತ್ತೇಗಾಲದ ಗೌಡರ ಚಂದ್ರಪ್ಪ, ಜಗದೀಶ್ ಮೂರ್ತಿ, ನಂಜುಂಡಸ್ವಾಮಿ, ಕನ್ನಹಳ್ಳಿ ಶಿವಕುಮಾರ್, ಕಾರ್ಯಕರ್ತರು ಇದ್ದರು.

Latest Posts

ಲೈಫ್‌ಸ್ಟೈಲ್