22.5 C
Bengaluru
Sunday, January 19, 2020

ಕ್ಷೇತ್ರದ ಸಮಗ್ರ ವಿಕಾಸವೇ ನನ್ನ ಅಜೆಂಡಾ

Latest News

ಕುಸಿದು ಬಿದ್ದ ಕಾಲುವೆ ಸಂಪರ್ಕ ಸೇತುವೆ ಪರಿಶೀಲನೆ

ಮುದ್ದೇಬಿಹಾಳ: ತಾಲೂಕಿನ ಸರೂರ, ಕವಡಿಮಟ್ಟಿ, ನೆರಬೆಂಚಿ ಗ್ರಾಮದ ಭಾಗದಲ್ಲಿ ಹಾಯ್ದು ಹೋಗಿರುವ ಕಾಲುವೆ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ್ದು, ಕೂಡಲೇ ದುರಸ್ತಿಗೆ ಅಧಿಕಾರಿಗಳು ಕ್ರಮ...

400 ಲೀಟರ್ ಹಾಲು ಮಣ್ಣು ಪಾಲು

ಬಸರಾಳು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ ಉರುಳಿಬಿದ್ದ ಪರಿಣಾಮ 300 ರಿಂದ 400 ಲೀಟರ್ ಹಾಲು ಮಣ್ಣುಪಾಲಾಗಿದೆ.ನಾಗಮಂಗಲ, ಬಸರಾಳು ಹೋಬಳಿಯ ವಿವಿಧ...

ಪಲ್ಸ್ ಪೋಲಿಯೋದಲ್ಲಿ ಶೇ.95ರಷ್ಟು ಸಾಧನೆ

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೊದಲ ದಿನವೇ 1,18663 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಜ.19ರಿಂದ 22ರವರೆಗೆ ಪಲ್ಸ್ ಪೋಲಿಯೋ...

ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವು ರಕ್ಷಣೆ

ಕೆ.ಎಂ.ದೊಡ್ಡಿ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಹೆಬ್ಬಾವು ಸಿಲುಕಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಮದ್ದೂರಿನ ಉರಗ ಸಂರಕ್ಷಕ ಮಾ.ನ. ಪ್ರಸನ್ನಕುಮಾರ್ ಹಾವನ್ನು ರಕ್ಷಿಸಿ...

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ವಿಜಯವಾಣಿ ಸುದ್ದಿಜಾಲ ಕಾರವಾರ: ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ನನ್ನ ರಾಜೀನಾಮೆ ಅನಿವಾರ್ಯವಾಗಿತ್ತು. ಅದನ್ನು ಅರಿತು ಮುನ್ನಡೆದಿದ್ದೇನೆ. ಮತ್ತೊಮ್ಮೆ ಜನರ ಬಳಿ ವಿಕಾಸದ ಅಜೆಂಡಾವನ್ನೇ ಇಟ್ಟುಕೊಂಡು ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಮತದಾರರು ಬೆಂಬಲಿಸುತ್ತಾರೆ ಎಂಬ ದೃಢವಾದ ನಂಬಿಕೆ ಇದೆ.

ಇದು ಯಲ್ಲಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಅವರ ಆತ್ಮವಿಶ್ವಾಸದ ಮಾತುಗಳು.

ಶಿವರಾಮ ಹೆಬ್ಬಾರ ಕಳೆದ ಎರಡು ಅವಧಿಗೆ ಯಲ್ಲಾಪುರ-ಮುಂಡಗೋಡ-ಬನವಾಸಿ ಕ್ಷೇತ್ರದಿಂದ ಗೆದ್ದು, ಸಾಕಷ್ಟು ಅಭಿವೃದ್ಧಿ ಮಾಡಿದ ಜನಪ್ರಿಯತೆ ಗಳಿಸಿದ್ದಾರೆ. ಸಾಮಾನ್ಯ ಜನರೊಟ್ಟಿಗೆ ಬೆರೆತು, ಅವರ ಸಮಸ್ಯೆಗಳನ್ನು ಅರಿತು ಸಾವಿರಾರು ಅಭಿಮಾನಿಗಳನ್ನು ಗಳಿಸಿದ್ದಾರೆ. ಈಗ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಂಡು, ಬೆಂಬಲಿಗರ ಜತೆ ಕೈ ತೊರೆದು, ಕಮಲ ಹಿಡಿದು ಉಪ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. ಗೆದ್ದು ಸಚಿವರೂ ಆಗುವ ಹಂಬಲ ಹೊಂದಿದ್ದಾರೆ. ತಮ್ಮ ಬಿಡುವಿಲ್ಲದ ಪ್ರಚಾರದ ಕಾರ್ಯಕ್ರಮಗಳು ನಡುವೆಯೂ ‘ವಿಜಯವಾಣಿ’ಗೆ ಸಂದರ್ಶನ ನೀಡಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

* ನಿಮ್ಮ ರಾಜೀನಾಮೆ ಹಾಗೂ ಈ ಉಪ ಚುನಾವಣೆ ಏಕೆ ಅನಿವಾರ್ಯವಾಯಿತು?

ಖಂಡಿತ ಅನಿವಾರ್ಯವಾಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಎಂಬುದು ಬರೀ ಕನಸಾಗಿತ್ತು. ಎನ್​ಡಬ್ಲ್ಯುಕೆಆರ್​ಟಿಸಿ ಅಧ್ಯಕ್ಷನಾಗಿದ್ದರೂ ಜನರ ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಕೂಲಂಕಶವಾಗಿ ಪರಾಮಶಿಸಿಯೇ ನಾನು ಕಠಿಣ ನಿರ್ಧಾರ ಕೈಗೊಂಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ರಾಜೀನಾಮೆ ನೀಡಿದೆ.

* ನೀವು ಈ ಹಿಂದೆ ಯಲ್ಲಾಪುರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಯಾವವು?

ಬನವಾಸಿ ಪ್ರಾಧಿಕಾರ ರಚನೆ; ಮುಂಡಗೋಡು, ಬನವಾಸಿಗೆ ಬೃಹತ್ ನೀರಾವರಿ ಯೋಜನೆ; ಬನವಾಸಿ, ಯಲ್ಲಾಪುರಕ್ಕೆ ಬಸ್ ನಿಲ್ದಾಣ; ಮಿನಿ ವಿಧಾನಸೌಧ; ಬನವಾಸಿ ಮುಂಡಗೋಡ ಐಟಿಐ ಕಾಲೇಜ್; 289.10 ಕೋಟಿ ರೂ. ವೆಚ್ಚದಲ್ಲಿ ಮುಂಡಗೋಡಿನಲ್ಲಿ ಮೊದಲ ಹಂತದಲ್ಲಿ 129 ಕೆರೆಗಳಿಗೆ ನೀರು ತುಂಬಿಸುವ ಯೋಜನೆ; ಎರಡನೇ ಹಂತದಲ್ಲಿ 225 ಕೋಟಿ ರೂ. ಅನುದಾನದಲ್ಲಿ 84 ಕೆರೆಗಳ ನೀರು ತುಂಬಿಸುವ ಯೋಜನೆ; ಬನವಾಸಿ ಭಾಗದ 32 ಕೆರೆಗಳಿಗೆ 62.58 ಕೋಟಿ ರೂ. ವೆಚ್ಚದಲ್ಲಿ ವರದಾ ನದಿಯಿಂದ ನೀರು ತುಂಬಿಸುವ ಯೋಜನೆ ಮಾಡಿದ್ದೇನೆ. ಯಲ್ಲಾಪುರದಲ್ಲಿ ಅಗ್ನಿಶಾಮಕ ಕಟ್ಟಡ ನಿರ್ವಣಗೊಂಡಿದೆ. ಭಾಶಿ ಪಂಚಾಯಿತಿ ವ್ಯಾಪ್ತಿಯಲ್ಲಿ ವರದಾ ನದಿಗೆ ಬೃಹತ್ ಬಾಂದಾರ ನಿರ್ವಣವಾಗಿದೆ. ಯಲ್ಲಾಪುರದ ಗುಳ್ಳಾಪುರ, ಶಿರಸಿ, ದಾಸನಕೊಪ್ಪ ಹಾಗೂ ಬನವಾಸಿಯಲ್ಲಿ 33 ಕೆವಿ ಗ್ರಿಡ್ ಆಗಿದ್ದು, ವಿದ್ಯುತ್ ಸಮಸ್ಯೆ ಬಗೆಹರಿದಿದೆ. ಇದು ಪ್ರಮುಖ ಯೋಜನೆಗಳ ಪಟ್ಟಿ ಮಾತ್ರ. ಇನ್ನೂ ಹಲವು ಕಾರ್ಯಗಳು ನನ್ನ ಅವಧಿಯಲ್ಲಿ ಆಗಿವೆ.

* ನೀವು ಇದುವರೆಗೆ ನೀಡಿದ ಭವರಸೆಗಳನ್ನು ಈಡೇರಿಸಿದ್ದೀರಾ?

ಖಂಡಿತವಾಗಿಯೂ ಜನರಿಗೆ ನೀಡಿದ ಭರವಸೆ ಈಡೇರಿಸಿದ್ದೇನೆ. ಸಾಕಷ್ಟು ಕಾರ್ಯಗಳಾಗಿವೆ. ಆದರೆ, ನನಗೆ ಅವು ತೃಪ್ತಿ ತಂದಿಲ್ಲ. ಕ್ಷೇತ್ರದಲ್ಲಿ ವಿಕಾಸದ ನಡಿಗೆ ಇನ್ನೂ ವೇಗವಾಗಬೇಕೆಂಬ ಮಹದಾಸೆ ಹೊಂದಿದ್ದೇನೆ. ಸಾಕಷ್ಟು ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅವುಗಳ ಪಟ್ಟಿ ಮಾಡಿ, ನೀಲಿನಕ್ಷೆ ರೂಪಿಸಿಕೊಂಡು ಪಕ್ಷದ ಹಿರಿಯರ ಮುಂದಿಟ್ಟುಕೊಂಡು ಸಮ್ಮತಿ ಪಡೆದಿದ್ದೇನೆ. ಅದನ್ನು ಸಾಕಾರ ಮಾಡಲು ಶ್ರಮಿಸುತ್ತೇನೆ.

* ನಿಮ್ಮ ಪ್ರಾಧಾನ್ಯತೆ ಏನು? ಕ್ಷೇತ್ರದ ಜನರಿಗೆ ನೀವು ನೀಡುವ ಭರವಸೆ ಏನು?

ಇದುವರೆಗೆ ಅಭಿವೃದ್ಧಿ ಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡು ರಾಜಕಾರಣ ಮಾಡಿದ್ದೇನೆ. ಕ್ಷೇತ್ರಕ್ಕೆ ಈ ಹಿಂದೆ ಹಲವು ಬೃಹತ್ ಯೋಜನೆಗಳನ್ನು ತಂದಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಯೋಚನೆ, ಯೋಜನೆಯ ನೀಲಿ ನಕ್ಷೆ ನನ್ನ ಬಳಿ ಇದೆ. ಪ್ರಮುಖವಾಗಿ ಕನ್ನಡದ ಮೊದಲ ರಾಜಧಾನಿ ಬನವಾಸಿಯನ್ನು ತಾಲೂಕನ್ನಾಗಿ ಮಾಡುವುದು. ಅತ್ತೀವೇರಿ, ಗುಡವಿ, ಯಲ್ಲಾಪುರದ ಸಾತೊಡ್ಡಿ ಸೇರಿ ಹಲವು ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಅಭಿವೃದ್ಧಿ. ನೀರಾವರಿಗೆ ಆದ್ಯತೆ ನೀಡಿ ಉಪ ಬೆಳೆಗಳನ್ನು ಬೆಳೆಸುವುದು. ಹೈನುಗಾರಿಕೆ, ಕುರಿ, ಕೋಳಿ ಉದ್ಯಮಕ್ಕೆ ಪ್ರೋತ್ಸಾಹ ನೀಡುವುದು. ಯಲ್ಲಾಪುರ, ಮುಂಡಗೋಡ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಪರಿಹಾರ ಯೋಜನೆ. ಕೈಗಾರಿಕಾ ವಲಯ ನಿರ್ಮಾಣ ಮಾಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಯುವಕ, ಯುವತಿಯರಿಗೆ ಊರಿನಲ್ಲೇ ಉದ್ಯೋಗ ಸಿಗುವಂತೆ ಮಾಡುವ ವ್ಯವಸ್ಥೆ. ಯಲ್ಲಾಪರ, ಮುಂಡಗೋಡ, ಬನವಾಸಿ ಭಾಗದ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು. ಒಳಚರಂಡಿ ನಿರ್ವಣಮಾಡುವುದು. ಹೀಗೆ ಹಲವು ಯೋಜನೆಗಳ ಪಟ್ಟಿಯಂತೆ ಅಭಿವೃದ್ಧಿಯೆಡೆಗೆ ನನ್ನ ನಡೆ ಮುಂದುವರಿಯಲಿದೆ.

* ಪ್ರತಿರೋಧ, ಭಿನ್ನಮತ ಇದೆಯೇ?

ಬಿಜೆಪಿ ನನಗೆ ಹೊಸದಲ್ಲ. ಪಾರ್ಟಿಯನ್ನು ಕಟ್ಟಿ ಬೆಳೆಸಿದವರ ಸಾಲಿನಲ್ಲಿ ನಾನೂ ಒಬ್ಬ. ಹಿಂದೆ ಪಕ್ಷದ ಜಿಲ್ಲಾಧ್ಯಕ್ಷನಾಗಿದ್ದೆ. ಆದರೆ, ಎರಡು ದಶಕಗಳಿಂದ ನಾನು ಬಿಜೆಪಿ ವಿರುದ್ಧ ಹೋರಾಟ ಮಾಡುವಂತಾಗಿತ್ತು. ಇವತ್ತು ನಾನು ಹಾಗೂ ನನ್ನ ಜೊತೆ ಹಲವು ಅಭಿಮಾನಿಗಳು ಬಿಜೆಪಿ ಸೇರಿದ್ದಾರೆ. ಒಂದೇ ಸಲ ಹೊರಗಿನಿಂದ ಜನರು ಬಂದಾಗ ಆ ಮನೆಯವರಲ್ಲಿ ಒಂದಷ್ಟು ಆತಂಕ, ದುಗುಡ, ಅನುಮಾನಗಳು ನಮಗೂ ಅವರಿಗೂ ಇರುವುದು ಸಹಜ. ಸಣ್ಣಪುಟ್ಟ ಗೊಂದಲಗಳಿವೆ ಎಂಬುದು ಹೌದು. ಈಗ ಶೇ. 90ರಷ್ಟು ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಇನ್ನು ಶೇ. 10 ರಷ್ಟು ಇರುವ ಭಿನ್ನಾಭಿಪ್ರಾಯಗಳನ್ನು ನಾವು, ಅವರು ಕುಳಿತು ಮಾತನಾಡಿ ಸುಧಾರಿಸಿಕೊಳ್ಳುತ್ತೇವೆ ಎಂಬ ವಿಶ್ವಾಸವಿದೆ. ಆದರೆ, ಅದು ಪ್ರಚಾರದ ಮೇಲಾಗಲಿ, ಫಲಿತಾಂಶದ ಮೇಲಾಗಲಿ ಪರಿಣಾಮ ಬೀರದು.

* ನಿಮ್ಮ ಪ್ರತಿಸ್ಪರ್ಧಿಯ ಬಲ ಹಾಗೂ ವೀಕ್​ನೆಸ್ ಏನು?

ನಾನು ಯಾವುದೇ ವೈಯಕ್ತಿಕ ಟೀಕೆ. ಟಿಪ್ಪಣೆ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ನನ್ನ ಎದುರಾಳಿ. ಅವರನ್ನು ಲಘುವಾಗಿ ಪರಿಗಣಿಸಿಲ್ಲ. ಹಾಗೆಂದು ನಾನು ಯಾರ ಗುಲಾಮನಲ್ಲ. ನಾಲಿಗೆ ಹರಿಬಿಡುವುದು ಅವರವರ ಸಂಸ್ಕೃತಿ ತೋರಿಸುತ್ತದೆ.

* ಗೆಲುವಿಗೆ ನಿಮ್ಮ ಬಲವೇನು?

ಬಿಜೆಪಿಯ ಎಲ್ಲ ರಾಜ್ಯ ನಾಯಕರ ಬೆಂಬಲವಿದೆ. ಪ್ರಚಾರಕ್ಕೂ ಬರಲಿದ್ದಾರೆ. ಸ್ಥಳೀಯ ಹಾಗೂ ಬೇರೆ ಜಿಲ್ಲೆಗಳ ಸಂಸದರು, ಶಾಸಕರು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡ ಮಾಜಿ ಶಾಸಕ, ಎನ್​ಡಬ್ಲ್ಯುಕೆಆರ್​ಟಿಸಿ ಅಧ್ಯಕ್ಷ ವಿ.ಎಸ್.ಪಾಟೀಲ ಹಾಗೂ ಇನ್ನೂ ಹಲವು ನಾಯಕರು ಬೆಂಬಲಕ್ಕೆ ನಿಂತಿರುವುದು ಕ್ಷೇತ್ರದಲ್ಲಿ ನಮಗೆ ಮತ್ತಷ್ಟು ಬಲ ಬಂದಂತಾಗಿದೆ.

* ನಿಮ್ಮ ಗೆಲುವಿಗೆ ಏನು ತಂತ್ರಗಾರಿಕೆ ರೂಪಿಸಿದ್ದೀರಿ?

ನೂರಕ್ಕೆ ನೂರರಷ್ಟು ನಾನು ಗೆಲ್ಲುತ್ತೇನೆ. ಅಲ್ಲದೆ, ಈ ಗೆಲುವಿಗೆ ಏನು ಬೇಕೋ ಅದೆಲ್ಲ ತಂತ್ರಗಾರಿಕೆಯನ್ನು ಭಾರತೀಯ ಜನತಾ ಪಕ್ಷದ ನಾಯಕರ ಸಲಹೆ, ಸಹಕಾರದೊಂದಿಗೆ ಮಾಡಿಕೊಂಡಿದ್ದೇನೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರದ 100 ದಿನದ ಸಾಧನೆಗಳನ್ನು ಇಟ್ಟುಕೊಂಡು ಪ್ರಚಾರ ಕೈಗೊಂಡಿದ್ದೇನೆ.

* ನಿಮ್ಮನ್ನೇ ಮತದಾರರು ಏಕೆ ಬೆಂಬಲಿಸಬೇಕು?

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಈ ಅವಧಿಯನ್ನು ಸಮರ್ಥವಾಗಿ ಬಳಸಿಕೊಂಡು ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗದಲ್ಲಿ ಆಗಬೇಕಾಗಿರುವ ಕೆಲಸಗಳನ್ನು ಮಾಡಿಸಿಕೊಳ್ಳಬಹುದು. ಈ ಹಿಂದೆ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಅನುಭವ ನನಗಿದೆ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...