ಕೊಳ್ಳೇಗಾಲ: ಮನೆಯ ಬಳಿ ಸೀಗರೇಟ್ ಸೇದಿ ಕೊಂಡು ಜಗಳವಾಡುತ್ತಿದ್ದವರನ್ನು ಪ್ರಶ್ನಿಸಿದ ಯುವ ಕನೊಬ್ಬನಿಗೆ ನಾಲ್ವರ ಗುಂಪೊಂದು ಹಲ್ಲೆಗೈದು ತೀವ್ರ ಗಾಯಗೊಳಿಸಿದೆ.
ಪಟ್ಟಣದ ನಟರಾಜು ಮಗ ನಿಶ್ಚಲ್‌ರಾಜ್ ಹಲ್ಲೆಗೆ ಒಳಗಾದ ಗಾಯಾಳು. ಟಿ.ಸಿ.ಹುಂಡಿ ತುಷಾರ್, ಆನಂದಜ್ಯೋತಿ ಕಾಲನಿಯ ಮಹೇಶ್, ಪಟ್ಟಣದ ವಿದ್ಯಾನಗರದ ಅರುಣ್, ದರ್ಶನ್ ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ.
ಮಹದೇಶ್ವರ ಕಾಲೇಜಿನ ಬಳಿ ಇರುವ ನಟರಾಜು ಮನೆಯ ಮುಂದೆ ಡಿ.9ರಂದು ತುಶಾರ್, ಮಹೇಶ್, ಅರುಣ್ ಸಿಗರೇಟ್ ಸೇದಿ ಕೊಂಡು ಜಗಳ ವಾಡು ತ್ತಿದ್ದರು. ಈ ವೇಳೆ ನಟರಾಜು ಅವರ ಪುತ್ರ ನಿಶ್ಚಲ್ ರಾಜ್ ಇಲ್ಲಿ ಸಿಗರೇಟ್ ಸೇದಬೇಡಿ ಎಂದು ಹೇಳಿದಕ್ಕೆ ಸಣ್ಣದಾಗಿ ಗಲಾಟೆ ಸಂಭವಿಸಿತ್ತು. ಡಿ.11 ರಂಸು ನಿಶ್ಚಲ್‌ರಾಜ್ ಮನೆ ಮುಂದೆ ನಿಂತಿದ್ದಾಗ ಏಕಾಏಕಿ ಆಗಮಿಸಿದ ತುಷಾರ್, ಮಹೇಶ್, ಅರುಣ್, ದರ್ಶನ್ ಅವರು ಜಗಳ ತೆಗೆದು ಕಬ್ಬಿಣದ ರಾಡು ಹಾಗೂ ಕಲ್ಲಿ ನಿಂದ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡಿರುವ ನಿಶ್ಚಲ್ ರಾಜ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖ ಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಬ್ಬಿಣದ ರಾಡು ಹಾಗೂ ಕಲ್ಲಿನಿಂದ ಹೊಡೆದು ಕೊಲೆಗೆ ಯತ್ನಿಸಿದ್ದಾರೆ.
ಅಲ್ಲದೆ ಜಗಳದ ಸಂದರ್ಭ ನನ್ನ ಕತ್ತಿನಲ್ಲಿದ್ದ ಅರ್ಧ ಭಾಗ ಚಿನ್ನದ ಚೈನ್ ಕಾಣೆಯಾಗಿದೆ ಎಂದು ಪೊಲೀಸರಿಗೆ ನಿಶ್ಚಲ್‌ರಾಜ್ ಹೇಳಿಕೆಯಲ್ಲಿ ದೂರಿ ದ್ದಾರೆ. ಈ ಸಂಬಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಎಸೈ ಮಧುಕುಮಾರ್ ಪ್ರಕರಣ ದಾಖಲಿಸಿ ಕೊಂ ಡಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದಾರೆ.