ಕ್ರೀಡೆಯಲ್ಲಿ ಪಾಲ್ಗೊಂಡರೆ ಸದೃಢ ಶರೀರ

ಮಾಂಜರಿ: ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮಿತ ಕೋರೆ ಹೇಳಿದ್ದಾರೆ.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆಂತರ ಮಹಾವಿದ್ಯಾಲಯ ವಿದ್ಯಾರ್ಥಿಗಳ ವಾಲಿಬಾಲ್ ಮತ್ತು ಥ್ರೋಬಾಲ್ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಲ್ಲಿಕಾರ್ಜುನ ಕೋರೆ, ಮಲ್ಲಪ್ಪ ಮೈಶಾಳೆ, ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಕಲ್ಲಪ್ಪ ಕೋರೆ ಇತರರು ಇದ್ದರು.

ಸ್ಪರ್ಧೆಯಲ್ಲಿ ಸುಮಾರು 25 ತಂಡಗಳು ಸಹಭಾಗಿಸಿದ್ದವು. ಪ್ರಥಮ ಸ್ಥಾನ ಪಡೆದ ಕೆ.ಎಲ್.ಇ. ಸಂಸ್ಥೆಯ ಮಹಾಲಿಂಗಪುರ ಪದವಿ ಪೂರ್ವ ಮಹಾವಿದ್ಯಾಲಯ ತಂಡಕ್ಕೆ 10,000 ರೂ. ನಗದು ಮತ್ತು ಸಂಸದ ಪ್ರಭಾಕರ ಕೋರೆ ಟ್ರೋಫಿ, ಎರಡನೇ ಸ್ಥಾನ ಪಡೆದ ಐನಾಪುರದ ಕೆಆರ್‌ಇಎಸ್ ಮಹಾವಿದ್ಯಾಲಯದ ತಂಡಕ್ಕೆ 6,000 ರೂ.ನಗದು ಮತ್ತು ಟ್ರೋಫಿ, ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಆಳಗವಾಡಿ ಸರ್ಕಾರಿ

ಪದವಿಪೂರ್ವ ಮಹಾವಿದ್ಯಾಲಯದ ಮಹಿಳಾ ತಂಡಕ್ಕೆ 10,000 ರೂ.ನಗದು ಹಾಗೂ ಟ್ರೋಫಿ, ಎರಡನೇ ಸ್ಥಾನ ಪಡೆದ ಬೆಳಗಾವಿಯ ಗೋಗಟೆ ಮಹಾವಿದ್ಯಾಲಯದ ಮಹಿಳಾ ತಂಡಕ್ಕೆ 6,000 ರೂ. ನಗದು ಹಾಗೂ ಟ್ರೋಫಿ ನೀಡಲಾಯಿತು. ಕಾರಾಮ ಪಾಟೀಲ, ಕುಮಾರ ಕೋರೆ, ಅಣ್ಣಾಸಾಹೇಬ ಜಕಾತೆ, ಸುರೇಶ ಪಾಟಿಲ, ಬಸವರಾಜ ಕೋರೆ, ಪಿಂಟು ಹಿರೇಕುರಬರ, ಪ್ರಭಾಕರ ಶಿಂಧೆ, ವಿವೇಕಾನಂದ ಕಮತೆ ಹಾಗೂ ಅಂಕಲಿ ಕೆಎಲ್‌ಇ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಚಾರ್ಯ ಸುಧೀರ ಕೋಟಿವಾಲೆ ನಿರೂಪಿಸಿದರು. ಉಪನ್ಯಾಸಕ ಮಾಚಕನೂರ ವಂದಿಸಿದರು.