ಅಥಣಿ ಗ್ರಾಮೀಣ, ಬೆಳಗಾವಿ: ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಅಡಹಳ್ಳಿ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಚಣ್ಣವರ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾಪಟುಗಳು ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಈರಗೌಡ ಪಾಟೀಲ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ನಮ್ಮ ಗ್ರಾಮದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದರು. ತಾಪಂ ಮಾಜಿ ಸದಸ್ಯ ಶಿವು ಗುಡ್ಡಾಪುರ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ಸುನೀಲ ಕೆಂಚಣ್ಣವರ, ಸೂರ್ಯಕಾಂತ ಡಂಬಳಕರ, ಬಸವರಾಜ ಮಾಳಿ, ಗ್ರಾಪಂ ಉಪಾಧ್ಯಕ್ಷ ಲಚ್ಚಪ್ಪ ಪತ್ತಾರ, ಆನಂದ ದೂಳಶೆಟ್ಟಿ, ಸಿದರಾಯ ಕೋಹಳ್ಳಿ, ಸತ್ಯಪ್ಪ ಸನದಿ, ಚಂದ್ರಶೇಖರ ಕೋಳಿ, ಮಹಾದೇವ ಪಾಟೀಲ, ಮೋಹನ ಸೂರ್ಯವಂಶಿ, ಭೀಮು ಕೇರಿ, ಲಕ್ಷ್ಮಣ ಬಣಜವಾಡ, ಸೋಮಶೇಖರ ಗೌಡರ ಇತರರಿದ್ದರು.
ಮುಗಳಖೋಡ ವರದಿ: ವಿದ್ಯಾರ್ಥಿಗಳು ಉತ್ಸುಕತೆಯಿಂದ ಕ್ರೀಡೆಯಲ್ಲಿ ಪಾಲ್ಗೊಂಡು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ.ಜಿ.ಬಾದಾಮಿ ಕರೆ ನೀಡಿದರು.
ರಾಯಬಾಗ ತಾಲೂಕು ಪಾಲಬಾವಿ ದಿ. ಮಲಗೌಡ ನೇಮಗೌಡ ನಾಯಿಕ (ಪಾಟೀಲ) ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಈಚೆಗೆ ಜರುಗಿದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಖೋ ಖೋ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದ ಅವರು.
ಪಾಲಬಾವಿ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಹಾಗೂ ಸುಟ್ಟಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಲಕರ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವು. ರಾಯಬಾಗ ತಾಲೂಕಿನ 8 ವಲಯದ ಬಾಲಕ ಹಾಗೂ ಬಾಲಕಿಯರ ಒಟ್ಟು 16 ತಂಡಗಳು ಭಾಗವಹಿಸಿದ್ದವು. 12 ಜನ ದೈಹಿಕ ಶಿಕ್ಷಕರು ಕ್ರೀಡಾ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾವೀರ ಜಿರಿಗಿಹಾಳ, ತಾತುಸಾಬಗೌಡ ಪಾಟೀಲ, ಶ್ರೀಕಾಂತ ಪಾಟೀಲ, ರಾಮಪ್ಪ ಕಾಡಶೆಟ್ಟಿ, ಇಲಾಹಿ ಕಾಗವಾಡ, ಭೂದಾನಿ ಅಣ್ಣಾಸಾಬಗೌಡ ಪಾಟೀಲ, ಶಿವಪ್ಪ ಕಾಡಶೆಟ್ಟಿ, ಪ್ರಕಾಶಗೌಡ ಪಾಟೀಲ, ಸುಲ್ತಾನಪುರ ಹೆಸ್ಕಾಂ ಮುಖ್ಯಾಧಿಕಾರಿ ಆಸ್ೀ ಕಾಗವಾಡ, ಬಸಪ್ಪ ತೇಗುರ, ಗುರುನಾಥ ಜಂಜರವಾಡ, ಸಾಗರ ಕುರಬೆಟ್ಟಿ, ಪರಪ್ಪ ಗೋಡಿ, ನಿವೃತ್ತ ಶಿಕ್ಷಕ
ಆರ್.ಡಿ.ಪಾಟೀಲ ಇತರರಿದ್ದರು.