Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಕ್ರಿಕೆಟ್ ಆಯ್ಕೆಗಾರರ ಸಂಭಾವನೆ ಏರಿಕೆ

Friday, 10.08.2018, 3:02 AM       No Comments

ಮುಂಬೈ: ದಶಕದ ಹಿಂದಿನವರೆಗೆ ರಾಷ್ಟ್ರೀಯ ಕ್ರಿಕೆಟ್ ಆಯ್ಕೆಗಾರರದ್ದು ಕೇವಲ ಗೌರವ ಹುದ್ದೆಯಾಗಿತ್ತು. ಆದರೆ ಈಗ ಕ್ರಿಕೆಟ್ ಆಯ್ಕೆಗಾರರೂ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಆಯ್ಕೆಗಾರರ ವಾರ್ಷಿಕ ಸಂಭಾವನೆಯನ್ನು ಬಿಸಿಸಿಐ ಭಾರಿ ಏರಿಕೆ ಮಾಡಿದೆ. ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಇದನ್ನು ಅಂಗೀಕರಿಸಿದೆ. ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಸಂಭಾವನೆ 20 ಲಕ್ಷ ರೂ. ಏರಿಕೆಯಾಗಿದೆ. ಇದರಿಂದ ಅವರಿನ್ನು 80 ಲಕ್ಷಕ್ಕೆ ಬದಲಾಗಿ ವಾರ್ಷಿಕ 1 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಇತರ ಆಯ್ಕೆಗಾರರ ವಾರ್ಷಿಕ ವೇತನ ತಲಾ 30 ಲಕ್ಷ ರೂ. ಏರಿಕೆಯಾಗಿದೆ. ಇದರಿಂದ ದೇವಾಂಗ್ ಗಾಂಧಿ ಮತ್ತು ಶರಣ್​ದೀಪ್ ಸಿಂಗ್ ಅವರಿನ್ನು 60 ಲಕ್ಷಕ್ಕೆ ಬದಲಾಗಿ 90 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. ಬಿಸಿಸಿಐ ಈ ಮುನ್ನ ದೇಶೀಯ ಕ್ರಿಕೆಟಿಗರು, ಅಂಪೈರ್, ಕ್ಯುರೇಟರ್, ಸ್ಕೋರರ್​ಗಳ ಸಂಭಾವನೆಯನ್ನು ಭಾರಿ ಏರಿಕೆ ಮಾಡಿತ್ತು.

ಜೂನಿಯರ್, ಮಹಿಳಾ ಆಯ್ಕೆಗಾರರಿಗೂ ಬಂಪರ್

ಸೀನಿಯರ್ ಆಯ್ಕೆ ಸಮಿತಿ ಜತೆಗೆ ಜೂನಿಯರ್ ಮತ್ತು ಮಹಿಳಾ ಆಯ್ಕೆ ಸಮಿತಿ ಸದಸ್ಯರ ಸಂಭಾವನೆಯೂ ಏರಿಕೆಯಾಗಿದೆ. ಜೂನಿಯರ್ ಆಯ್ಕೆ ಸಮಿತಿ ಅಧ್ಯಕ್ಷರ ಸಂಭಾವನೆ ವಾರ್ಷಿಕ 65 ಲಕ್ಷ ರೂ.ಗೆ ಏರಿಕೆಯಾಗಿದ್ದರೆ, ಇತರ ಆಯ್ಕೆಗಾರರು ಸಂಭಾವನೆ 60 ಲಕ್ಷ ರೂ. ಪಡೆಯಲಿದ್ದಾರೆ. ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷರು ವಾರ್ಷಿಕ 30 ಲಕ್ಷ ರೂ. ಸಂಭಾವನೆ ಪಡೆದರೆ, ಇತರ ಆಯ್ಕೆಗಾರರ ಸಂಭಾವನೆ 25 ಲಕ್ಷ ರೂ.ಗೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *

Back To Top