ಕ್ಯಾನ್ಸರ್​ಗೆ ಆಯುರ್ವೆದದಲ್ಲಿ ಚಿಕಿತ್ಸೆ ಇಲ್ಲ

ಬೆಂಗಳೂರು: ಕ್ಯಾನ್ಸರ್​ಗೆ ಆಯುರ್ವೆದಲ್ಲಿ ಚಿಕಿತ್ಸೆ ಇದೆ ಎಂದು ಹೇಳಿ ಕೆಲವರು ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ವಾಸ್ತವವಾಗಿ ಕ್ಯಾನ್ಸರ್​ಗೆ ಆಯುರ್ವೆದದಲ್ಲಿ ಚಿಕಿತ್ಸೆ ಇಲ್ಲ. ಈ ಬಗ್ಗೆ ಜನಜಾಗೃತಿ ಅಗತ್ಯ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ ಹೇಳಿದ್ದಾರೆ.

ಕಿಮೋ ಮೆಡಿಕಲ್ ಗ್ರಂಥಿ ಶಾಸ್ತ್ರಜ್ಞರ ಹಳೇ ವಿದ್ಯಾರ್ಥಿಗಳ ಸಂಘ ನಿಮ್ಹಾನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಲಿಂಫೋಕಾನ್ 2019’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಯುರ್ವೆದ ಔಷಧಿಯಲ್ಲಿ ಸ್ಟಿರಾಯ್್ಡ ಮತ್ತು ಮೆಟಲ್ ಅಂಶಗಳು ಹೆಚ್ಚಾಗಿರುವುದರಿಂದ ಕ್ಯಾನ್ಸರ್​ಗಿಂತ ಇತರ ಅಂಗಾಂಗಗಳ ಮೇಲೆ ಅದು ಪರಿಣಾಮ ಬೀರಲಿದೆ. ಆಯುರ್ವೆದದವರು ಉತ್ತಮ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿರಬಹುದು. ಆದರೆ, ಕ್ಯಾನ್ಸರ್​ಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಅಲೋಪಥಿಯಲ್ಲಿ ಮಾತ್ರವೇ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ ಎಂದರು. ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಪರಿಸರ ಮಾಲಿನ್ಯ, ಬದಲಾದ ಜೀವನಶೈಲಿಯೇ ಇದಕ್ಕೆ ಕಾರಣ. ದೇಹದಲ್ಲಿ ಗಂಟಿನ ಅಂಶಗಳು ಕಂಡುಬಂದರೆ ಪರೀಕ್ಷೆಗೆ ಒಳಪಡುವುದು ಸೂಕ್ತ. ಕಳೆದ 5 ವರ್ಷದಲ್ಲಿ ಕಿದ್ವಾಯಿ ನಲ್ಲಿ 1,100 ಲಿಂಪೋಮಾ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಇ-ತ್ಯಾಜ್ಯ, ಮೆಡಿಕಲ್ ಘನತಾಜ್ಯ ಇವುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದಿರುವುದು ಲಿಂಫೋಮಾ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಹೇಳಿದರು.

ಜ.13ರಂದು ಕೊನೆಗೊಳ್ಳಲಿರುವ ಈ ಸಮಾವೇಶದಲ್ಲಿ ಲಿಂಫೋಮಾ ಕ್ಯಾನ್ಸರ್ ಬೆಳವಣಿಗೆ, ಇದಕ್ಕೆ ಲಭ್ಯವಿರುವ ಚಿಕಿತ್ಸೆ, ಸಂಶೋಧನೆಗಳ ಕುರಿತು ಚರ್ಚೆ ನಡೆಯಲಿದೆ.

ವಿವಿಧ ದೇಶಗಳ ವೈದ್ಯರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *