ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

ನಿಲ್ಲು ನೀ ನೀಳವೇಣಿ

ಸಾಂಪ್ರದಾಯಿಕ ವೇಷಭೂಷಣದ ಸಂಭ್ರಮಾಚರಣೆ ತಯಾರಿ ಮಧ್ಯೆ ಸೆಲ್ಪಿಗೆ ಸಮಯ ಕೊಡದಿದ್ದರೆ ಘೊರ ಅನ್ಯಾಯವೇ ಸರಿ! ‘ನಿಲ್ಲು ನೀ ನಿಲ್ಲು ನೀಳವೇಣಿ…’ ಗೀತೆ ನೆನಪಿಸಿ, ತಲೆದೂಗುವಂತೆ ಲುಕ್ ಕೊಟ್ಟಿದ್ದಾರೆ ಎಚ್​ಎಸ್​ಆರ್ ಲೇಔಟ್​ನ ಶಕುಂತಲಾದೇವಿ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್​ನ ಬಿಕಾಂ ವಿದ್ಯಾರ್ಥಿಗಳು. ಚಿತ್ರ ಕಳಿಸಿದವರು ಚೇತನ್.


ಭಾವಶಿಲ್ಪ

ಶಿಲ್ಪಕಲೆಗಳ ತವರೂರು ಎಂಬ ಖ್ಯಾತಿ ಗಳಿಸಿರುವ ಕರುನಾಡಿನ ಪುರಾತನ ದೇಗುಲವೊಂದರ ಬಳಿ ಸೆಲ್ಪಿ ತೆಗೆದು ಮೆರೆದಿದ್ದಾರೆ ಬಸವನಗುಡಿ ಆರ್.ವಿ. ರಸ್ತೆಯ ವಿಜಯ ಮೇನ್ ಕಾಲೇಜಿನ ವಿದ್ಯಾರ್ಥಿಗಳ ಬಳಗ. ಚಿತ್ರ ತೆಗೆದ ದುರ್ಗೇಶ್ ಗೌಡರೇ… ಕ್ಯಾಮರಾ ಸ್ವಲ್ಪ ಮೇಲಕ್ಕೆ ಬಾಗಿಸಿದ್ದರೆ ದೇಗುಲದ ಅಂದದ ಜತೆಗೆ ನಿಮ್ಮ ಮುಖಾರವಿಂದ ಮತ್ತಷ್ಟು ಬೆಳಗುತ್ತಿತ್ತು…


ಒಂದು ಮೊಟ್ಟೆಯ ಕಥೆ

‘ಜೀವನವೊಂದು ರೇಸ್. ಆ ಸ್ಪರ್ಧೆಯಲ್ಲಿ ಶಕ್ತಿಯನುಸಾರ ಓಡದೇ ಹೋದರೆ ನಿನ್ನ ಸ್ಥಿತಿ ಒಡೆದುಹೋದ ಮೊಟ್ಟೆಯಂತಾಗಿಬಿಡುತ್ತೆ..’ ಸಿನಿಡೈಲಾಗ್ ಅನ್ನು ಧ್ವನಿಸುವಂತೆ ಪೋಸ್ ಕೊಟ್ಟಿದ್ದಾರೆ ವಿಜಯನಗರದ ಆರ್​ಎನ್​ಎಸ್ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳು. ಸೆಲ್ಪಿ ರವಾನಿಸಿದವರು ಪವನ್​ಕುಮಾರ್.

 

Leave a Reply

Your email address will not be published. Required fields are marked *