ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

ವಿನ್​ ಕೈಸನ್ನೆ

ಕೈಬೆರಳುಗಳ ಮೂಲಕ ‘ವಿನ್ ಸಿಂಬಲ್’ ತೋರಿಸೋದೇನೋ ಸರಿ, ಆದರೆ ಅದೇ ಕೋನದಲ್ಲಿ ಬೆರಳುಗಳನ್ನು ಕಣ್ಣಿಗೆ ಕೊಂಡೊಯ್ದರೆ ಯಾವುದೋ ವಿಷಯಕ್ಕೆ ‘ಗುರಿ’ ಇಟ್ಟಂತಾಗುತ್ತೆ. ಸ್ವಲ್ಪ ಬಾಗಿಸಿ ನೆರಕ್ಕೆ ಚಾಚಿದರೆ ‘ಗನ್’ ಆಗಿಬಿಡುತ್ತೆ! ಎಲ್ಲರೂ ಸಾಲಾಗಿ ನಿಂತಿದ್ದಾಗ ಇಂಥದ್ದೊಂದು ಚೆಂದದ ರಿಸ್ಕ್​ಗೆ ಸನ್ನದ್ಧರಾದಂತಿದೆ ಆನೇಕಲ್​ನ ಶ್ರೀ ಸಾಯಿರಾಂ ಕಾಲೇಜ್ ಆಫ್ ಇಂಜಿನಿಯರಿಂಗ್​ನ ದ್ವಿತೀಯ ಬಿಇ ವಿದ್ಯಾರ್ಥಿಗಳು. ಚಿತ್ರ ಕಳಿಸಿದವರು ಸಚಿನ್​ಕುಮಾರ್.


ಸ್ನೇಹಕ್ಕೆ ತಲೆಬಾಗೋಣ!

ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು, ಹಾಗೇ ‘ಕಾನೂನು ವ್ಯಾಸಂಗ ಮಾಡುತ್ತಿರುವ ನಮ್ಮ ಸ್ನೇಹದ ಸೆಲ್ಪಿಗೂ ನೀವು ತಲೆಬಾಗಲೇಬೇಕು’ ಎಂಬ ಪ್ರೀತಿಪೂರ್ವಕ ಹಕ್ಕೊತ್ತಾಯ ಮಂಡಿಸಿದವರಂತೆ ಸ್ವೀಟ್ ಲುಕ್ ಕೊಟ್ಟಿದ್ದಾರೆ ಗಾಯತ್ರಿನಗರದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬಿಎ-ಎಲ್​ಎಲ್​ಬಿ ಪ್ರಥಮ ಸೆಮ್ ಸುಷ್ಮಾ ಮತ್ತಿತರರು.


ಸಂತೋಷದ ಘಳಿಗೆ

ತುಂಬ ಎತ್ತರಕ್ಕೇರಿದಾಗ ಮನಸ್ಸಿನಲ್ಲಿ ಬಿತ್ತರಗೊಳ್ಳುವುದು ಸಂತೋಷ ಮಾತ್ರ. ಎತ್ತರದ ಬೆಟ್ಟವೇರಿದ ಬಳಿಕ ತಮಗಾದ ಸಂತಸವನ್ನು ಬಣ್ಣಿಸಲು ಪದಗಳೇ ಸಿಗದಿದ್ದಾಗ ಸೆಲ್ಪಿ ಮೊರೆಹೋಗಿದ್ದಾರೆ ಯಲಹಂಕದ ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್ ಕಾಲೇಜಿನ ಸಾಗರ್ ಮತ್ತು ಬಳಗ.

Leave a Reply

Your email address will not be published. Required fields are marked *