Thursday, 13th December 2018  

Vijayavani

Breaking News

ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

Sunday, 07.01.2018, 3:03 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

ಒಂದು ಮುತ್ತಿನ ಸೆಲ್ಫಿ! 

‘ಒಂದು ಮುತ್ತಿನ ಕಥೆ’ ಸಿನಿಮಾದ ‘ಮುತ್ತೊಂದ ತಂದೆ ಕಡಲಾಳದಿಂದ.. ಅದೇ ಅಂದ ಇಲ್ಲಿ ಕಂಡೆ…’ ಹಾಡು ನೆನಪಿಸುತ್ತಿದ್ದಾರೆ ಕೋರಮಂಗಲದ ಸೇಂಟ್ ಫ್ರಾನ್ಸಿಸ್ ಕಾಲೇಜಿನ ಭಾವನಾ ಮತ್ತು ಗೆಳತಿಯರು. ಉಫ್ ಅಂತ ‘ಫ್ಲೈಯಿಂಗ್ ಕಿಸ್’ ಕೊಡೋದು ಎಷ್ಟೋ ವಾಸಿ, ಆದರೆ ಈ ತರಹ ‘ಉಮ್ಮಾ’ ಅಂತ ಸ್ಟ್ಯಾಚೂ ಆಗಿಬಿಟ್ಟರೆ ನೋಡುಗರ ಸ್ಥಿತಿ ಹೇಗಾಗಬೇಡ?!


ಸ್ಮೈಲ್ ಪ್ಲೀಸ್…

ಕ್ರಿಸ್ ಗೇಲ್ ಮೈ‘ಚಳಿ’ಬಿಟ್ಟು ಕ್ರೀಡಾಂಗಣದಾಚೆ ಸಿಕ್ಸರ್ ಬಾರಿಸುವಷ್ಟೇ ಥ್ರಿಲ್ ಕೊಡುತ್ತೆ ಕ್ರಿಸ್​ವುಸ್ ಹಬ್ಬ! ಅಂಥ ಸಂಭ್ರಮದ ಹಿನ್ನೆಲೆ ಇದ್ದಾಗ್ಯೂ ಈ ರೀತಿ ಮುಖ ಗಂಟಿಕ್ಕಿಕೊಂಡರೆ ಹೇಗ್ರಮ್ಮಾ? ಶೇಷಾದ್ರಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ಬಿಕಾಂ ತರಗತಿಯ ಲಿಖಿತಾ ಕಳಿಸಿದ ಚಿತ್ರವಿದು.


ಮನಸ್ಸಿನ ಚೆಂದ

ಅಂದ ಚೆಂದದ ವಿಷಯಕ್ಕೆ ಬಂದ್ರೆ ಮೇಲ್ನೋಟಕ್ಕೆ ಸೆಳೆಯುವವರು ನಿಸ್ಸಂಶಯವಾಗಿ ಹುಡುಗಿ ಯರೇ. ಆದ್ರೆ, ‘ನಾವು ಮುಖಭಾವದಲ್ಲೇ ಮನಸ್ಸನ್ನು ಬಗೆದು ತೋರಿಸ್ತಿದ್ದೀವಿ. ಸ್ವಲ್ಪ ಗಮನಿಸಿ ಸ್ವಾಮಿ…’ ಎನ್ನುವಂತೆ ಪೋಸ್ ಕೊಟ್ಟಿದ್ದಾರೆ ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಕಾಲೇಜಿನ ಶರತ್​ಕುಮಾರ್. ಹೀಗೂ ಉಂಟು!!

Leave a Reply

Your email address will not be published. Required fields are marked *

Back To Top