Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

Friday, 05.01.2018, 3:01 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಗೆಲುವಿನ ಗಮ್ಮತ್ತು

‘ವ್ಯಕ್ತಿಗಿಂತ ದೇಶ ದೊಡ್ಡದು’ ಎಂಬ ಹೇಳಿಕೆ ಕೊಟ್ಟಿದ್ದರು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ. ಅಂಥ ದೊಡ್ಡ ದೇಶಕ್ಕೆ ನಮ್ಮಂಥ ಯುವಜನರ ದುಡಿಮೆ ಶ್ರಮ ಸೇರಿದರೆ ಆಗ ಸಿಗುವ ಗೆಲುವಿನ ಗಮ್ಮತ್ತೇ ಬೇರೆ- ಎನ್ನುವಂತೆ ‘ವಿನ್’ ಸಂಕೇತ ರವಾನಿಸಿದ್ದಾರೆ ಶೇಷಾದ್ರಿ ರಸ್ತೆಯ ಎಸ್​ಜೆ ಸರ್ಕಾರಿ ಪಾಲಿಟೆಕ್ನಿಕ್​ನ ಡಿಪ್ಲೊಮಾ ವಿದ್ಯಾರ್ಥಿ ಬಸವರಾಜು ಮತ್ತು ಬಳಗ.


 ಸ್ನೇಹ ಸೇತುವೆ

‘ಅಮೃತವಾಹಿನಿ ಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ…’ ಕಾವ್ಯವಾಣಿಯಂತೆ, ಕಾಲೇಜಿನಲ್ಲಿ ಮನಸ್ಸಿನಿಂದ ಮನಸ್ಸಿಗೆ ಸ್ನೇಹಸೇತುವೆ ನಿರ್ವಣವಾಗುತ್ತೆ. ಆ ಸೇತುವೆ ಮೇಲೆ ಸೆಲ್ಪಿ ವಿಹಾರದ ಥ್ರಿಲ್ ಅನುಭವಿಸಿದ್ದಾರೆ ರಾಜಾಜಿನಗರದ ಎಂಇಐ ಪಾಲಿಟೆಕ್ನಿಕ್​ನ ಸೌಮ್ಯಾ.


 ನಮ್ಮತನದ ತಂತ್ರಜ್ಞಾನ

ಯಾರೇನೇ ಹೇಳಿದರೂ ನಮ್ಮತನದ ಅರಿವು ನಮಗೆ ಚೆನ್ನಾಗಿ ಇರುತ್ತೆ. ಆದರೂ ಅದನ್ನು ಬೇರೆ ಆಯಾಮದಿಂದ ನೋಡುವುದರಲ್ಲಿ ಅವ್ಯಕ್ತ ಆನಂದ. ಅಂಥ ಆನಂದವನ್ನು ಅನಾಯಾಸವಾಗಿ ನೀಡುವ ಸೆಲ್ಪಿಗೆ ಆಭಾರಿಯಾಗಿದ್ದಾರೆ ಸೋಲದೇವನಹಳ್ಳಿ ಆಚಾರ್ಯ ಮತ್ತು ಬಿಎಂ ರೆಡ್ಡಿ ಕಾಲೇಜ್ ಆಫ್ ಫಾರ್ಮಸಿ ಡಿ.ಫಾರ್ಮ ವಿದ್ಯಾರ್ಥಿಗಳು. ಚಿತ್ರ ಕಳಿಸಿದ್ದು ಅಭಿಷೇಕ್.

Leave a Reply

Your email address will not be published. Required fields are marked *

Back To Top