ಕ್ಯಾಂಪಸ್ ಸೆಲ್ಪಿ

ತ್ಯಾಗ ಅಮರ!

ಕಾಲೇಜು ದಿನಗಳಲ್ಲಿ ಜತೆಯಾಗಿ ಓದುವುದು, ರ್ಚಚಿಸುವುದು ಇದ್ದೇ ಇರುತ್ತೆ. ತಿಪ್ಪಗೊಂಡನಹಳ್ಳಿಯ ಚಿತ್ರಕೂಟ ಕಾಲೇಜಿನ ಗೆಳೆಯರ ಬಳಗ ತಿಂಡಿ ತಿನ್ನುವ ವೇಳೆಯಲ್ಲೂ ಸೆಲ್ಪಿ ಮೂಡ್​ನಲ್ಲಿ ಕಣ್ಣರಳಿಸುತ್ತಿದ್ದಾರೆ. ಈ ಚಿತ್ರ ಕ್ಲಿಕ್ಕಿಸುವ ಭರದಲ್ಲಿ ಹರ್ಷಿತಾ ತಮ್ಮ ಮುಖವನ್ನೇ ಸರಿಯಾಗಿ ಕವರ್ ಮಾಡದೇ ‘ಸ್ನೇಹದಲ್ಲಿ ತ್ಯಾಗ ಅಮರ’ ಸಂದೇಶ ಸಾರಿದ್ದಾರೆ!

ನಾವೇ ಮೇಲು

ಗೆಳೆಯರು ಜತೆಗಿದ್ದು ಹರಟೆ ಕೊಚ್ಚುವಾಗ, ಮಾತುಮಾತಿಗೂ ‘ದೇ ತಾಲಿ’ ಅನ್ನುತ್ತ ಕೈಯಿಂದ ಕೈಗೆ ಚಪ್ಪಾಳೆ ಸದ್ದು ಹೊರಡಿಸಿ ಸಂಭ್ರಮಿಸುತ್ತಾರೆ. ಮಹೇಶ್ ಪಿಯ ಕಾಲೇಜಿನ ದ್ವಿತೀಯ ವರ್ಷದ ಉದಯ್ ಗೌಡ ಗೆಳೆಯರು ಫೋಟೊದಲ್ಲಿ ತಾವಷ್ಟೇ ಹೈಲೈಟ್ ಆಗಿದ್ದಕ್ಕೆ ಹಾಗೊಂದು ತಾಲಿ ವಿನಿಮಯ ಮಾಡಿಕೊಂಡರಾ?!

ಸಲ್ವಾರ್ ಸ್ಮೈಲ್

ಹುಡುಗಿಯರು ಕಲರ್ ಡ್ರೆಸ್ ಹಾಕಿಕೊಂಡು ಒಟ್ಟಿಗೆ ಬಂದ್ರೆ, ಬಟ್ಟೆ ಅಂಗಡಿಯೇ ಕಾಲೇಜಿಗೆ ಬಂದಹಾಗಿರುತ್ತೆ! ವಿಜಯನಗರ (ಹಂಪಿನಗರ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೇಘನಾ ಕಳಿಸಿರುವ ಈ ಚಿತ್ರದಲ್ಲಿ ಸಲ್ವಾರ್​ಗಳ ವೆರೈಟಿಯನ್ನು ನೋಡಿ..

Leave a Reply

Your email address will not be published. Required fields are marked *