ಕ್ಯಾಂಪಸ್ ಸೆಲ್ಪಿ

ಎಥ್ನಿಕ್ ಗ್ಯಾಂಗ್

ಮಾರ್ಚ್ ಸೆಖೆಗೆ ತಂಪನೆಯ ಅನುಭವ ಕೊಡುವ ಸಂಗತಿಗಳಲ್ಲಿ ಎಥ್ನಿಕ್ ಡೇಗೆ ವಿಶೇಷ ಸ್ಥಾನ. ಪಿಇಎಸ್​ಐಟಿ ಕಾಲೇಜಿನ ಎಲೆಕ್ಟ್ರಿಕಲ್ ಆಂಡ್ ಕಮ್ಯೂನಿಕೇಷನ್ ವಿಭಾಗದ ಚೇತನ್​ಕುಮಾರ್ ತಮ್ಮ ಗೆಳೆಯರ ಗ್ಯಾಂಗ್​ನ ಡಿಫರೆಂಟ್ ಲುಕ್ ಸೆರೆಹಿಡಿದ ಪರಿ ಇದು.

ಸಾರ್ಥಕ ಕ್ಷಣ

ಗೆಳೆತನದ ಅಪ್ಪುಗೆಯಲ್ಲಿ ವ್ಯಕ್ತವಾಗುವ ಆಪ್ತ ಭಾವನೆಗಳಿಗೆ ಬೆಲೆ ಕಟ್ಟಲಾಗದು. ಕೆಂಗೇರಿ ಉಪನಗರದ ಸುರಾನಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಹನಾ ಅಂಥ ಅಪ್ಪುಗೆಯ ಸಿಹಿ ಸಂದರ್ಭವನ್ನು ಕ್ಲಿಕ್ಕಿಸಿದ ಸಾರ್ಥಕ ಕ್ಷಣ.

ಕ್ಯೂಟ್ ಚಹರೆ

ಟಿಲ್ಟ್ ಅಪ್ ಆಂಗಲ್​ನಲ್ಲಿ ತೆಗೆಯೋ ಫೋಟೋದಲ್ಲಿ ಮೈಗಿಂತ ಮುಖವೇ ಜಾಸ್ತಿ ಹೈಲೈಟ್ ಆಗುತ್ತೆ. ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಕಾಲೇಜಿನ ಬೃಂದಾ ತೆಗೆದಿರುವ ಈ ಸೆಲ್ಪಿಯಲ್ಲಿ ಪ್ರತಿಯೊಬ್ಬರ ಮುಖಾರವಿಂದವೂ ಕ್ಯೂಟ್ ಆಗಿ ಕಾಣಿಸುತ್ತಿವೆ!

ಕಲೆ ಮರೆಮಾಚಿ…

ಹುಡುಗೀರು ಸೆಲ್ಪಿ ತೆಗೆದರೆ, ಆಪ್ತರ ಹೊರತುಪಡಿಸಿ ಅಷ್ಟು ಸುಲಭಕ್ಕೆ ಬೇರೆಯವರಿಗೆ ತೋರಿಸೋದಿಲ್ಲ. ಫೋಟೋ ಚೆನ್ನಾಗಿ ಎಡಿಟ್ ಮಾಡಿ, ಮುಖದ ಕಲೆ ಮರೆಮಾಚುವುದನ್ನು ಮರೆಯುವುದಿಲ್ಲ. ವಾಸವಿ ವಿದ್ಯಾಪೀಠ ಕಾಲೇಜಿನ ಕಾವ್ಯಶ್ರೀ ಮತ್ತವರ ಸ್ನೇಹಿತೆಯರು ಸ್ವಲ್ಪ ಜಾಸ್ತಿಯೇ ಈ ಜಾಣ್ಮೆ ಅನುಸರಿಸಿದ್ದಾರೆ.

Leave a Reply

Your email address will not be published. Required fields are marked *