ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಬಿಸಿಲಿದು ಬರಿ ಬಿಸಿಲಲ್ಲವೋ…

‘ಬಿಸಿಲಿದು ಬರೀ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ..’ ಅಂತ ಹಾಡಿದ್ದಾರೆ ರಾಷ್ಟ್ರಕವಿ ಕುವೆಂಪು. ಬೆಳಗುವ ಮುಖಾರವಿಂದ ಹಾಗೂ ಸೂರ್ಯನ ಬಿಸಿಲು- ಎರಡೂ ಎದ್ದು ಕಾಣಿಸುವಂತೆ ‘ಫೋಕಸ್ಡ್’ ಸೆಲ್ಪಿಯಲ್ಲಿ ಜತೆಯಾಗಿದ್ದಾರೆ ಅರಮನೆ ರಸ್ತೆಯಲ್ಲಿರುವ ಆರ್.ಸಿ. ಕಾಲೇಜಿನ ವಿದ್ಯಾರ್ಥಿ ಬಳಗ. ಚಿತ್ರ ಕಳಿಸಿದವರು ಪ್ರಶುಮಗು ಎಂ.


ಬಿಡುವಿನ ಹೊತ್ತು

ಸಂಜೆ ವೇಳೆ ಕುಟುಂಬದ ಸದಸ್ಯರೆಲ್ಲ ಒಂದೆಡೆ ಸೇರಿಕೊಂಡು ಕಾಫಿ- ತಿಂಡಿ ಸವಿಯುತ್ತ ಹಾಯಾಗಿ ಹರಟುತ್ತ ಹಗುರಾಗುವಂತೆ, ಶೇಷಾದ್ರಿಪುರಂ ಪದವಿ ಕಾಲೇಜಿನ ಬಿಕಾಂ ತರಗತಿಯ ಸಹಪಾಠಿಗಳು ಆಪ್ತ ನೋಟ ಬೀರುತ್ತಿದ್ದಾರೆ. ಚಿತ್ರ ರವಾನಿಸಿದವರು ಸುನೀಲ್.


ಸ್ನೇಹ ಪ್ರಕೃತಿ

ಯುಗಾದಿ ಹತ್ತಿರವಾಗುತ್ತಿರುವ ಈ ಕಾಲದಲ್ಲಿ ಕೆಲವು ಮರಗಳು ಮೈತುಂಬ ಹೂ ಮುಡಿದು ಸಿಂಗರಿಕೊಂಡಿದ್ದರೆ, ಮತ್ತೆ ಕೆಲವು ಎಲೆಯುದುರಿಸಿ ಹೊಸ ಹಸಿರಿಗೆ ಅಣಿಯಾಗುತ್ತಿವೆ. ಆದರೆ, ನಮ್ಮ ‘ಸ್ನೇಹಪ್ರಕೃತಿ’ಯಲ್ಲಿ ಬದಲಾವಣೆ ಭರದಲ್ಲೂ ಏಕರೀತಿಯಲ್ಲಿರುತ್ತದೆ ಎಂದು ಸಾರುತ್ತಿದೆ ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಟಿ.ಎಚ್. ಕೆಂಪರಾಜು ಕಳಿಸಿರುವ ಈ ಚಿತ್ರ.

Leave a Reply

Your email address will not be published. Required fields are marked *