ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ತಿದ್ದಿ ತೀಡಿದ ಅಂದ…

 ಮರಿಯಪ್ಪನಪಾಳ್ಯದಲ್ಲಿರುವ ಮರಿಯಪ್ಪ ಪದವಿ ಕಾಲೇಜಿನ ವಿದ್ಯಾರ್ಥಿನಿ ಅರ್ಚನಾ ಭಟ್ ಮತ್ತು ಗೆಳತಿಯರೆಲ್ಲರ ಅಂದವು ತಿದ್ದಿ ತೀಡಿದಂತಿದೆ… ಎಲ್ಲರೂ ಒಂದೇ ಬ್ಯೂಟಿ ಪಾರ್ಲರ್​ನಿಂದ ಹೊರಬಂದಂತಿದೆ ಎನ್ನುವುದು ಶುದ್ಧ ಕುಹಕವಾಗಬಹುದೇನೋ…!

ತದೇಕ ಚಿತ್ತ…

ಆಕಾಶ ನೋಡೋಕೆ ನೂಕುನುಗ್ಗಲು ಅನ್ನೋ ಮಾತಿದೆ. ಆದರೆ, ಭುವಿಯನ್ನು ದಿಟ್ಟಿಸಲು ಪೈಪೋಟಿ ನಡೆಸಿದಂತಿದ್ದಾರೆ ಮಾಚೋಹಳ್ಳಿ ಗೇಟ್​ವಿದ್ಯಾ ಸಂಸ್ಕಾರ ಕಾಲೇಜಿನ ಬಿಕಾಂ 2ನೇ ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಗಾಯತ್ರಿ ಮತ್ತು ಸ್ನೇಹಿತೆಯರು.

ನಾವ್ಯಾಕೆ ಲೆಕ್ಕಕ್ಕಿಲ್ಲ…

 ಗುಂಪಿನಲ್ಲಿ ಗೋವಿಂದಾ ಎನ್ನುವುದೇನೋ ನಿಜ ಆದರೆ, ಗುಂಪಿನಲ್ಲಿದ್ದು ಲೆಕ್ಕಕ್ಕೆ ಸಿಗದಂತಾಗಿದೆ ಚಾಮರಾಜಪೇಟೆಯ ಆದರ್ಶ ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್ಸ್ ಇಬ್ಬರು ಎಂಬಿಎ ವಿದ್ಯಾರ್ಥಿಗಳ ಪಾಡು…! ಚಿತ್ರ ಕಳುಹಿಸಿದ್ದು ರಂಜಿತ್

Leave a Reply

Your email address will not be published. Required fields are marked *