Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Monday, 11.06.2018, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಸ್ನೇಹಮಯ ಕ್ಷಣ
ಪದವಿಪ್ರದಾನ ಸಮಾರಂಭದಲ್ಲಿ ಗೌನ್ ಹಾಕಿಕೊಳ್ಳುವ ಅವಕಾಶ ಸಿಗುವುದು ಕೆಲವೇ ಗಂಟೆಗಳವರೆಗೆ ಮಾತ್ರ. ಅಷ್ಟರಲ್ಲೇ ಸಮಾರಂಭವೂ ಸೇರಿ, ನೆಚ್ಚಿನ ಸ್ನೇಹಿತರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು. ವಿಠ್ಠಲ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಯತೀಶ್ ತಮಗೊದಗಿದ ಕ್ಷಣವನ್ನು ಹಿಡಿದಿಟ್ಟಿರುವುದು ಹೀಗೆ.
ನಗೆಭಾವ
ಗ್ರೂಪ್ ಸೆಲ್ಪಿ ಸೆರೆಹಿಡಿಯುವವರು ಎಲ್ಲರನ್ನೂ ಸರಿಯಾದ ಕೋನದಲ್ಲಿರಿಸುವ ಭರದಲ್ಲಿ ಸ್ವತಃ ಅವರೇ ಚಂದದ ಮುಖಭಾವ ಹೊಮ್ಮಿಸುವುದನ್ನು ಮರೆತುಬಿಡುತ್ತಾರೆ. ಆದರೆ, ಇಲ್ಲಿ ಉಲ್ಟಾ! ಜೈನ್ ವಿಶ್ವವಿದ್ಯಾಲಯದ ಬಿಕಾಂ ಸಹಪಾಠಿಗಳೊಟ್ಟಿಗೆ ಪ್ರಖರ ನಗೆಬೀರುತ್ತಿದ್ದಾರೆ ಸ್ಕಂದನ್.
ನೋಟಿಸ್ ಮಾಡಿ…
ಮೊ‘ಬಯಲ’ಲ್ಲಿ ಕ್ಯಾಮರಾ ಬಂದು, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಅವಕಾಶವೂ ಪ್ರಾಪ್ತವಾದ ಬಳಿಕ ಎಲ್ಲೆಲ್ಲೂ ನೋಡುಗರ ಗಮನ ಸೆಳೆಯುವವರ ಸ್ಪರ್ಧೆಯೇ ಉಂಟಾದಂತಿದೆ! ಕೆ.ಆರ್. ವೃತ್ತದಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಬಿಎಸ್​ಸಿ ತೃತೀಯ ವರ್ಷದ ಗೆಳೆಯರು ನೋಟಿಸ್ ಬೋರ್ಡ್ ಎದುರು ನಿಂತು ‘ನಮ್ಮನ್ನು ನೋಟಿಸ್ ಮಾಡಿ’ ಎನ್ನುತ್ತಿದ್ದಾರೆ. ಚಿತ್ರ ಕಳುಹಿಸಿದವರು ಶ್ರೀನಿವಾಸ.

Leave a Reply

Your email address will not be published. Required fields are marked *

Back To Top