Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Tuesday, 07.08.2018, 3:01 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಅಕ್ಕರೆಯ ಹಕ್ಕೊತ್ತಾಯ

‘ನನ್ನ ಕಡೆ ನೋಡಿ… ಇಲ್ನೋಡಿ… ಅವರನ್ನೆಲ್ಲ ಬಿಟ್ಹಾಕಿ ನಾ ಹೇಗೆ ಕಾಣ್ತಿದ್ದೀನಿ ಹೇಳಿ..’ ಎಂದೆಲ್ಲ ಅಕ್ಕರೆಯುಳ್ಳ ಹಕ್ಕೊತ್ತಾಯ ಸಲ್ಲಿಸುವವರಂತೆ ಪೋಸ್ ಕೊಟ್ಟಿರುವ ಸಹಪಾಠಿಗಳನ್ನು ಸೆಲ್ಪಿಯಲ್ಲಿ ಕ್ಯೂಟ್ ಆಗಿ ಸೆರೆಹಿಡಿದವರು ಮಾಗಡಿಯ ಬಿಜಿಎಸ್ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಪುನೀತ್.


ಕೌತುಕದ ಸವಾಲು

ಪತ್ರಿಕೆಗಳಲ್ಲಿ ಬರುವ ಪದಬಂಧ ಅಂಕಣದಂತೆ ಕುತೂಹಲಕರ ಅರ್ಥಗಳನ್ನು ಬಚ್ಚಿಟ್ಟುಕೊಂಡು ‘ನಮ್ಮ ಮನಸ್ಸಲ್ಲೇನಿದೆ ಹೇಳಿ ನೋಡೋಣ’ ಎಂದು ಪ್ರಶ್ನಿಸುತ್ತಿರುವಂತಿದೆ ಮಾಗಡಿ ರಸ್ತೆ ಸುಂಕದಕಟ್ಟೆಯ ಓಂ ಸಾಯಿ ಕಾಲೇಜಿನ ಗೆಳತಿಯರು. ಚಿತ್ರ ರವಾನಿಸಿದವರು ಮೀರಾ.


ಸೂಪರ್​ವೆುನ್!

ಪ್ರತಿ ವಿದ್ಯಾರ್ಥಿಯಲ್ಲೂ ‘ನನ್ನಿಂದ ಎಲ್ಲವೂ ಸಾಧ್ಯ. ನಾನೇ ಸೂಪರ್ ಮ್ಯಾನ್’ ಎಂಬ ವಿಶ್ವಾಸ ಮನೆ ಮಾಡಿರುತ್ತದೆ. ಯೌವನದ ಬಿಸಿರಕ್ತ ಮೂಡಿಸುವ ವಿಶಿಷ್ಟ ಭಾವವನ್ನೇ ಭವಿಷ್ಯದ ಸಾಧನೆಗೆ ಏಣಿ ಮಾಡಿಕೊಳ್ಳುವ ಉತ್ಸಾಹದೊಂದಿಗೆ ಸಾಮೂಹಿಕ ಲುಕ್ ಕೊಟ್ಟಿದ್ದಾರೆ ಹೆಬ್ಬಾಳದ ಏಟ್ರಿಯಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಿಇ ದ್ವಿತೀಯ ವರ್ಷದ ಸಹಪಾಠಿಗಳು. ಚಿತ್ರ ಕಳುಹಿಸಿದವರು ಆರ್. ಮಣಿಕಂಠ.

Leave a Reply

Your email address will not be published. Required fields are marked *

Back To Top