Thursday, 13th December 2018  

Vijayavani

Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Thursday, 04.01.2018, 3:00 AM       No Comments

ತರಗತಿ ಸತ್ಕಾರ!

ಮನೆಯಲ್ಲಿ ಆಯೋಜಿತವಾದ ವಿಶೇಷ ಕಾರ್ಯಕ್ರಮಕ್ಕೆ ಗೆಳೆಯರೆಲ್ಲ ಬಂದರೆ ಸೋಫಾದಲ್ಲಿ ಹಾಯಾಗಿ ಕುಳಿತುಕೊಂಡು ಅತಿಥಿ ಸತ್ಕಾರವನ್ನು ಆನಂದಿಸುತ್ತಾರೆ. ತರಗತಿ ಕೋಣೆಯನ್ನೂ ಕೆಲವು ಕ್ಷಣ ಆ ಕೋನದಲ್ಲಿ ನೋಡಿದರೆ ಹೇಗಿರುತ್ತೆ? ಈ ಪ್ರಶ್ನೆಗೆ ಉತ್ತರದಂತಿದೆ ಬಸವನಗುಡಿಯ (ನರಸಿಂಹರಾಜ ಕಾಲನಿ) ಸ್ವಾಮಿ ವಿವೇಕಾನಂದ ಟ್ರಸ್ಟ್​ನ ರಮೇಶ್​ಗೌಡ ಕಳಿಸಿರುವ ಚಿತ್ರ.


ನಾನೂ ನನ್ನ ಸ್ನೇಹಿತೆಯರೂ…

ವಿದ್ಯಾರ್ಥಿ ಬದುಕಿನಲ್ಲಿ ದ್ವಿತೀಯ ಪಿಯು ಮಹತ್ವದ ಘಟ್ಟ. ಒಂದೇ ಗಿಡದಲ್ಲಿ ಚಿಲಿಪಿಲಿಗುಟ್ಟುವ ಪಕ್ಷಿಗಳು ಒಮ್ಮೆಲೇ ವಿವಿಧ ದಿಕ್ಕುಗಳಗೆ ಹಾರಿಹೋದಂತೆ ಸಹಪಾಠಿಗಳು ಬೇರೆ ಬೇರೆ ಕೋರ್ಸ್​ಗಳನ್ನು ಆಯ್ಕೆ ಮಾಡಿಕೊಂಡು ಬೇರೆ ಬೇರೆ ಊರುಗಳಿಗೆ ಹೋಗಿಬಿಡುತ್ತಾರೆ. ಅಗಲಿಕೆ ಅನಿವಾರ್ಯವಿರಬಹುದು, ಆದರೆ ಆಕಸ್ಮಿಕ ಭೇಟಿಯ ಆನಂದವನ್ನು ಸೆಲ್ಪಿ ಮೂಲಕ ಚಿರಂತನವಾಗಿಸಿದ್ದಾರೆ ಕೆ.ಎಂ. ಕಾರಿಯಪ್ಪ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಇಂಡಿಯನ್ ಪಿಯು ಕಾಲೇಜಿನ ದ್ವಿತಿಯ ಪಿಯು ವಿದ್ಯಾರ್ಥಿನಿ ಸ್ನೇಹಾ.


ರೇಸ್​ನಲ್ಲಿ ನಾವಿದ್ದೇವೆ…

 

ಒಂದು ಗಂಟೆ ಅವಧಿಯಲ್ಲಿ ಎಷ್ಟು ಸೆಲ್ಪಿ ತೆಗೆಯಬಹುದು- ಹೀಗೊಂದು ಸ್ಪರ್ಧೆ ಏರ್ಪಡಿಸಿದರೆ ಆ ರೇಸ್​ನಲ್ಲಿ ನಾವೆಲ್ಲ ಖಂಡಿತವಾಗಿ ಭಾಗವಹಿಸ್ತೀವಿ ಎಂಬಂತೆ ಪೋಸ್ ಕೊಟ್ಟಿದ್ದಾರೆ ರೇಸ್​ಕೋರ್ಸ್ ರಸ್ತೆಯ ಸರ್ಕಾರಿ ಆರ್​ಸಿ ಕಾಲೇಜ್ ಆಫ್ ಕಾಮರ್ಸ್​ನ ಅಂತಿಮ ಬಿಕಾಂ ವಿದ್ಯಾರ್ಥಿಗಳು. ಚಿತ್ರ ಕಳಿಸಿದವರು ಶ್ರೀಕಾಂತ್.

Leave a Reply

Your email address will not be published. Required fields are marked *

Back To Top