Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Thursday, 09.08.2018, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಭಾವುಕ ಮುಗುಳುನಗೆ

‘ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ… ಏಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ…’ ಯೋಗರಾಜ್ ಭಟ್ ‘ಮುಗುಳುನಗೆ’ ಸಿನಿಮಾದಲ್ಲಿ ಬರೆದ ಹಾಡಿನಂತೆ ಸಾಮೂಹಿಕವಾಗಿ ಭಾವುಕ ಮುಗುಳುನಗೆ ಹೊರಸೂಸಿದ್ದಾರೆ ಕುಂದನಹಳ್ಳಿಯ ಸಿಎಐಆರ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಿಇ ಪ್ರಥಮ ವರ್ಷದ ಗೆಳತಿಯರು. ಶ್ರೇಯಾ ರವಾನಿಸಿದ ಚಿತ್ರ ಇದು.


ಶಿಸ್ತಿನ ಸಾಲು

ಉದ್ಯಾನದಲ್ಲಿ ತಡೆಗೋಡೆ ಮಾದರಿಯಲ್ಲಿ ದಟ್ಟವಾಗಿ ಬೆಳೆಯುವ ಪೊದೆಗಿಡಗಳಂತೆ ಸಾಲಾಗಿ ನಿಂತು ಶಿಸ್ತು ಪ್ರದರ್ಶಿಸಿದ್ದಾರೆ ಜಕ್ಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ಕಾಲೇಜಿನ ಸಹಪಾಠಿಗಳು. ಡಾಲಿ ಸಬ ಕಳುಹಿಸಿದ ಚಿತ್ರವಿದು.


ವಿಶಿಷ್ಟ ಬಳಗ

ಗಿಡಮರಗಳು ಹೂಬಿಡುತ್ತವೆ, ಆದರೆ ಗುಲಾಬಿಯ ವಿಶೇಷತೆಯೇ ಬೇರೆ. ಎಲ್ಲ ಗೆಳೆಯರ ಬಳಗದಲ್ಲಿ ನಮಗೆ ನಮ್ಮದೇ ವಿಶಿಷ್ಟ’ ಎನ್ನುವಂತೆ ಪೋಸ್ ಕೊಟ್ಟಿದ್ದಾರೆ ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನ ತೃತೀಯ ಬಿಕಾಂ ತರಗತಿಯ ಅಭಿಷೇಕ್ ಮತ್ತಿತರರು.

Leave a Reply

Your email address will not be published. Required fields are marked *

Back To Top