Friday, 16th November 2018  

Vijayavani

Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Friday, 06.07.2018, 3:02 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಇಷ್ಟದ ಬಳ್ಳಿ

ಸಮಾನಮನಸ್ಕರು ಇದ್ದಲ್ಲಿ ಗೆಳೆತನದ ಬಳ್ಳಿ ಕೊನರಿ, ವ್ಯಾಪಕವಾಗಿ ಹಬ್ಬುತ್ತದೆ. ಹಾಗೆ ಹಬ್ಬುವ ಬಳ್ಳಿಯ ಬೇರು ಎಲ್ಲಿರುತ್ತದೆ ಎಂಬುದನ್ನು ಪತ್ತೆಹಚ್ಚುವುದು ಮೇಲ್ನೋಟಕ್ಕೆ ಕಷ್ಟ. ‘ನಮ್ಮ ಫ್ರೆಂಡ್​ಶಿಪ್ ನಿಂತಿರೋದು ಕಷ್ಟದ ಮೇಲಲ್ಲ ಸ್ವಾಮಿ.. ಇಷ್ಟದ ಮೇಲೆ’ ಎನ್ನುವಂತೆ ಪೋಸ್ ಕೊಟ್ಟಿದ್ದಾರೆ ಕೆ.ಆರ್. ವೃತ್ತದ ಎಸ್​ಜೆ ಪಾಲಿಟೆಕ್ನಿಕ್​ನ ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿ ಟಿಪ್ಪು ಮತ್ತಿತರರು.


ಪೂರ್ಣ ನಗೆ

ಒಬ್ಬರಿಗಿಂತ ಒಬ್ಬರು ಚೆಂದದ ಗೆಳತಿಯರನ್ನು ಸೆರೆಹಿಡಿಯುವ ಉತ್ಸಾಹ ದಲ್ಲಿ ಸೆಲ್ಪಿ ತೆಗೆಯುವವರ ಮುಖ ಇಲ್ಲಿ ಅರ್ಧ ಮಾತ್ರ ಬಂದಿದೆ. ಹಾಗೆಂದು ಬೇಸರಿಸಿಕೊಳ್ಳದೇ ಪೂರ್ಣ ನಗು ಬೀರಿದ್ದಾರೆ ಮಲ್ಲೇಶ್ವರದ ಎಂಇಎಸ್ ಪಿಯು ಕಾಲೇಜಿನ ಯಶಸ್ವಿನಿ.


ಕ್ಯಾ ಸೆಲ್ಪಿ ಹೈ!

‘ಕ್ಯಾ ಬಾತ್ ಹೈ…!!’ ಎಂದು ಮನಸಾರೆ ಪ್ರಶಂಸೆ ವ್ಯಕ್ತಪಡಿಸುವಂಥ ಮಾತುಗಳು ಕಾಲೇಜು ಕ್ಯಾಂಟೀನ್​ನಲ್ಲಿ ಡೈಲಾಗ್ ರೂಪದಲ್ಲಿ ಉದುರುತ್ತಲೇ ಇರುತ್ತವೆ. ಡೈಲಾಗ್ ಜತೆಗೆ ‘ಕ್ಯಾ ಸೆಲ್ಪಿ ಹೈ’ ಎಂಬಂಥ ಚಿತ್ರ ರವಾನಿಸಿದ್ದಾರೆ ಎಲೆಕ್ಟ್ರಾನಿಕ್ ಸಿಟಿಯ ಎಸ್​ಎಫ್​ಎಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿ ವಿನೋದ್​ಕುಮಾರ್.

Leave a Reply

Your email address will not be published. Required fields are marked *

Back To Top