Friday, 16th November 2018  

Vijayavani

Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Thursday, 05.07.2018, 3:02 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಲೋಕಪ್ರೀತಿ ಹಂಚೋಣ

‘ದೀಪದಿಂದ ದೀಪವ ಹಚ್ಚಬೇಕು ಮಾನವ.. ಪ್ರೀತಿಯಿಂದ ಪ್ರೀತಿ ಹಂಚಲು…’ ಹಾಡು ನೆನಪಿಸುವಂತೆ ಪದವಿಪ್ರದಾನ ಸಮಾರಂಭದಲ್ಲಿ ಶಿಕ್ಷಣದ ಮೌಲ್ಯವನ್ನೇ ತಮ್ಮ ಹಾವಭಾವಗಳ ಮೂಲಕ ವಿಶಿಷ್ಟವಾಗಿ ಅಭಿವ್ಯಕ್ತಿಸಿದ್ದಾರೆ ಮಲ್ಲೇಶ್ವರದ ಎಂಎಲ್​ಎ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಪಾಠಿಗಳು. ಚಿತ್ರ ಕಳುಸಿದವರು ವಿ. ಪೂರ್ಣಿಮಾ.


ನಾವು ನಾವೇ!

ಜೋರು ಮಾತುಗಳು, ನಗೆ, ಕಾಲೆಳೆಯುವುದು.. ಹೀಗೆ ಗುಂಪಿನಲ್ಲಿದ್ದಾಗ ಸ್ನೇಹಿತರ ನಡೆ- ನುಡಿಯಲ್ಲಿ ಅದೆಂಥದ್ದೋ ಶಕ್ತಿ ಆವಾಹನೆಯಾಗಿರುತ್ತದೆ. ಅದೆಲ್ಲ ಸದ್ದಿಗೆ ಮುನ್ನ ಶಿಸ್ತಿನಿಂದ ಗ್ರೂಪ್ ಸೆಲ್ಪಿಗೆ ಪೋಸ್ ಕೊಟ್ಟಿದ್ದಾರೆ ರಾಜಾಜಿನಗರ ಪ್ರಥಮ ದರ್ಜೆ ಪೇರೆಂಟ್ಸ್ ಅಸೋಸಿಯೇಷನ್ ಕಾಲೇಜಿನ ರಕ್ಷಿತ್ ಶೆಟ್ಟಿ ಮತ್ತು ಬಳಗ.


ಪ್ರಭಾವಳಿ!

ಕಿಟಕಿಯಿಂದ ಬರುತ್ತಿರುವ ಸೂರ್ಯನ ಪ್ರಭೆ, ಕಿಟಕಿ ಪಕ್ಕದಲ್ಲಿ ನಿಂತು ಚರ್ಚೆಯಲ್ಲಿ ಮುಳುಗಿರುವ ಗೆಳತಿಯರ ಯೋಜನೆಗಳ ಪ್ರಭೆ ಹಾಗೂ ನಮ್ಮ ಮುಖಾರವಿಂದದಲ್ಲಿ ಸೆರೆಯಾಗಿರುವ ಕಣ್ಣಬೆಳಕಿನ ಪ್ರಭೆ- ಈ ಮೂರರಲ್ಲಿ ಯಾವುದಕ್ಕೆ ಜಾಸ್ತಿ ಅಂಕ ಕೊಡುತ್ತೀರಿ?… ಎಂಬಂಥ ಕಠಿಣ ಪ್ರಶ್ನೆ ಹಾಕಿ ಒಳಗೊಳಗೇ ಖುಷಿಪಟ್ಟಿದ್ದಾರೆ ಹೊಸಕೋಟೆಯ ಶ್ರೀ ಮಾರುತಿ ಪದವಿ ಕಾಲೇಜಿನ ಹೇಮಾ ಮತ್ತಿತರರು.

Leave a Reply

Your email address will not be published. Required fields are marked *

Back To Top