Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Sunday, 10.06.2018, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಸ್ನೇಹದ ದೋಣಿ

ರಾಷ್ಟ್ರಕವಿ ಕುವೆಂಪು ಅವರ ‘ದೋಣಿ ಸಾಗಲಿ ಮುಂದೆ ಹೋಗಲಿ’ ಕವಿತೆಯ ‘ಹಸಿರು ಜೋಳದ ಹೊಲದ ಗಾಳಿಯ ತೀಡಿ ತಣ್ಣಗೆ ಬರುತಿದೆ.. ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ..’ ಚರಣದಂತೆ ಸ್ನೇಹದ ದೋಣಿ ಮೇಲೆ ನಗೆಪಯಣದ ನೋಟ ಬೀರಿದ್ದಾರೆ ಶೇಷಾದ್ರಿಪುರದ ಶೇಷಾದ್ರಿಪುರಂ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ತರಗತಿಯ ಗೆಳೆಯರು. ಚಿತ್ರ ಕಳಿಸಿದವರು ಹರೀಶ್.

ಸಂಭ್ರಮದ ಸಾಲು

ಊರಿಗೆ ಬಂದವಳು ನೀರಿಗೆ ಬರದೇ ಇರುವಳೇ’ ಎಂಬ ಹಳೆಯ ನಾಣ್ನುಡಿಯನ್ನು, ‘ಕಾಲೇಜಿಗೆ ಬಂದವರು ಸೆಲ್ಪಿಗೆ ಲುಕ್ ಕೊಡದೇ ಇರುತ್ತಾರೆಯೇ’ ಎಂದು ಬದಲಿಸಿದವರಂತೆ ಆಪ್ತವಾಗಿ ಸಾಲುಗಟ್ಟಿದ್ದಾರೆ ಜಯನಗರ 4ನೇ ಬ್ಲಾಕ್​ನಲ್ಲಿರುವ ವಿಜಯ ಕಾಲೇಜಿನ ಬಿಕಾಂ ಅಂತಿಮ ವರ್ಷದ ಸಹಪಾಠಿಗಳು. ಚಿತ್ರ ರವಾನಿಸಿದವರು ನಿಶಾ.

ಖಡಕ್ ಲುಕ್

ಇನ್​ಶರ್ಟ್ ಮಾಡಿ, ತೋಳುಗಳನ್ನು ಮೊಣಕೈವರೆಗೆ ಏರಿಸಿ, ದಕ್ಷ ಪೊಲೀಸ್ ಅಧಿಕಾರಿಗಳನ್ನು ಹೋಲುವ ಖಡಕ್ ಲುಕ್ ಕೊಟ್ಟಿರುವ ಹುಡುಗಿಯರ ಚಿತ್ರವನ್ನು ಹೆಮ್ಮೆಯಿಂದ ರವಾನಿಸಿದ್ದಾರೆ ಪೀಣ್ಯದ ಎಐಎಂಎಸ್ ಇನ್​ಸ್ಟಿಟ್ಯೂಟ್​ನ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿ ಪ್ರಶಾಂತ್​ಕುಮಾರ್.

Leave a Reply

Your email address will not be published. Required fields are marked *

Back To Top