More

  ಕೌಶಲ, ಆತ್ಮವಿಶ್ವಾಸ ಯಶಸ್ಸಿಗೆ ದಾರಿ

  ಕಲಬುರಗಿ: ಕೌಶಲ, ಛಲಗಾರಿಕೆ ಮತ್ತು ಆತ್ಮವಿಶ್ವಾಸದೊಂದಿಗೆ ಕೆಲಸ ನಿರ್ವಹಿಸಿದ್ದಲ್ಲಿ ಯಶಸ್ಸು ಕಾಣಬಹುದಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಹೇಳಿದರು.

  ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಹಮ್ಮಿಕೊಂಡ ಎರಡು ದಿನದ ನಿರ್ಮಾಣ ತಾಂತ್ರಿಕ-ಸಾಂಸ್ಕೃತಿಕ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಕಷ್ಟ-ಕಾರ್ಪಣ್ಯ, ಸಂಕಷ್ಟಗಳನ್ನು ಎದುರಿಸಿದಾಗಲೇ ಉತ್ತಮ ವ್ಯಕ್ತಿ ರೂಪುಗೊಳ್ಳಲು ಸಾಧ್ಯ. ಜತೆಗೆ ಉನ್ನತ ಹಂತಕ್ಕೆ ಬೆಳೆಯಲೂಬಹುದು. ಈ ನಿಟ್ಟಿನಲ್ಲಿ ಯಾವುದೇ ಸಮಸ್ಯೆ ಎದುರಾದರೂ ಸಮರ್ಥವಾಗಿ ನಿಭಾಯಿಸುವ ಕಲೆ, ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

  ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಕಲಬುರಗಿ ಜಿಲ್ಲೆ ಶೈಕ್ಷಣಿಕ ಹಬ್ ಆಗಿ ಮಾರ್ಪಟ್ಟಿದೆ. ಸಿಯುಕೆ, ಗುಲ್ಬರ್ಗ ವಿವಿ, ಕೆಬಿಎನ್ ವಿವಿ, ಶರಣಬಸವ ವಿವಿ, ಕಮಾಲಾಪುರದ ಸತ್ಯಸಾಯಿ ಮಾನವೀಯ ಅಧ್ಯಯನ ವಿಶ್ವವಿದ್ಯಾಲಯಗಳಿವೆ. ಶೈಕ್ಷಣಿಕ ಸಂಸ್ಥೆಗಳು ಇರದಿದ್ದರೆ ಬೇರೆಡೆ ಹೋಗಿ ಶಿಕ್ಷಣ ಪಡೆಯುವ ಕಾಲ ಎದುರಾಗುತ್ತಿತ್ತು. ಈ ಹಿಂದೆ ಮಾಜಿ ಸಿಎಂ ದಿ. ಧರ್ಮಸಿಂಗ್ ಆದಿಯಾಗಿ ಅನೇಕರು ಹೈದರಾಬಾದ್‌ಗೆ ತೆರಳಿ ಶಿಕ್ಷಣ ಪಡೆದಿದ್ದಾರೆ ಎಂದು ಸ್ಮರಿಸಿದರು.

  ನಿರಂತರ ೧೨ ವರ್ಷಗಳಿಂದ ನಿರ್ಮಾಣ ಸಾಂಸ್ಕೃತಿಕ ಉತ್ಸವ ನಡೆಸಿಕೊಂಡು ಬರುತ್ತಿರುವುದು ಒಳ್ಳೆಯ ವಿಚಾರ. ಮೊದಲ ಬಾರಿ ವಿಧಾನಸಭೆಗೆ ಪ್ರವೇಶಿಸಿದ ನಂತರ ಹಾಜರಾದ ಈ ಮೊದಲ ಕಾರ್ಯಕ್ರಮ ನಿಜಕ್ಕೂ ಖುಷಿ ತಂದುಕೊಟ್ಟಿದೆ ಎಂದರು.

  ಸಂಸ್ಥೆ ಉಪಾಧ್ಯಕ್ಷ ಡಾ.ಎಸ್.ಆರ್. ಹರವಾಳ, ಪ್ರಮುಖರಾದ ಬಸವರಾಜ ಖಂಡೇರಾವ್, ಡಾ.ಜಗನ್ನಾಥ ಬಿಜಾಪುರ, ವಿನಯ ಪಾಟೀಲ್, ಡಾ.ಅನೀಲಕುಮಾರ ಪಟ್ಟಣ, ಡಾ.ಭಾರತಿ ಹರಸೂರ, ಡಾ.ಕಲ್ಪನಾ ವಾಂಜರಖೇಡ, ಪ್ರೊ.ರವೀಂದ್ರ ಲಠ್ಠೆ, ಡಾ.ಪ್ರಶಾಂತ ಕಾಂಬಳೆ, ಡಾ.ಶ್ರೀದೇವಿ ಸೋಮಾ, ಡಾ.ಬಾಬುರಾವ್ ಶೇರಿಕಾರ ಇತರರಿದ್ದರು.

  ಅಮೂಲ್ಯ ಲೋಕನಳ್ಳಿ ಪ್ರಾರ್ಥನೆ ಗೀತೆ ಹಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಆರ್. ಮೀಸೆ ಸ್ವಾಗತಿಸಿದರು. ಡಾ.ಪ್ರಶಾಂತ ಕಾಂಬಳೆ ವಂದಿಸಿದರು. ಲಕ್ಷ್ಮೀಕಾಂತ ಹೂಗಾರ ತಂಡದವರು ಪ್ರಾರ್ಥಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts