ಕೋಲಿ ಸಮಾಜದ ಏಳ್ಗೆಗಾಗಿ ಶ್ರಮಿಸಿದ ಖರ್ಗೆ

ಕಮಲಾಪುರ: ಕಳೆದ ಹಲವಾರು ವರ್ಷಗಳಿಂದ ಕೋಲಿ ಸಮಾಜದ ಕಷ್ಟ- ಸುಖಗಳಿಗೆ ಸ್ಪಂದಿಸಿ, ಅವರ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವುದು ಮಲ್ಲಿಕಾರ್ಜುನ ಖರ್ಗೆ ಮಾತ್ರ ಎಂದು ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಸದಸ್ಯ ಹಾಗೂ ಕೋಲಿ ಸಮಾಜದ ಮುಖಂಡ ತಿಪ್ಪಣಪ್ಪ ಕಮಕನೂರ ಹೇಳಿದರು.
ಡೊಂಗರಗಾಂವದಲ್ಲಿ ಹಮ್ಮಿಕೊಂಡಿದ್ದ ಕೋಲಿ ಸಮಾಜದ ಸಭೆಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕೋಲಿ ಸಮಾಜ ಮುಖ್ಯ ವಾಹಿನಿಗೆ ತರಲು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಖರ್ಗೆ ಅವರು 371(ಜೆ), ಇಎಸ್ಐ, ಕೇಂದ್ರೀಯ ವಿವಿ ಸೇರಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹೀಗಾಗಿ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು. ಪ್ರಮುಖರಾದ ರಾಜಗೋಪಾಲ ರೆಡ್ಡಿ, ವಿಜಯಕುಮಾರ ಹದಗಲ್, ಬಸವರಾಜ ಹಡಗಲ್, ಬಸವರಾಜ ಮಹಾಗಾಂವ, ರಾಮಚಂದ್ರ ನಾಟೀಕರ್, ಶಿವಕುಮಾರ ಮರಗುತ್ತಿ, ಸಂಜುಕುಮಾರ ಅಕನೂರ, ದಶರಥ ಸಿತಾಳಗೇರಿ, ಲಿಂಗಣ್ಣ ಹಂದಿಕೇರಿ, ಭೀಮಶಾ ನಾಟೀಕರ್, ಶರಣಪ್ಪ ಇತರರಿದ್ದರು.