ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಮಧ್ಯವರ್ತಿಗಳ ಹಾವಳಿ / ಶ್ರೀಮಂತರಿಗೆ ಚಿಕಿತ್ಸೆ / ಬಡವರಿಗೆ ಚಿಕಿತ್ಸೆ ಇಲ್ಲದೆ ಪರದಾಟ / ವೈದ್ಯರಿಗೆ ಕಳಂಕ ತರುತ್ತಿರುವ ಮಧ್ಯವರ್ತಿಗಳು /

ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಬಡವರ ಪಾಲಿನ ದೇವಾಲಯವಾಗಬೇಕಿದ್ದ ಸರ್ಕಾರಿ ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆಗೆ ಮಧ್ಯವರ್ತಿಗಳ ಹಾವಳಿಯಿಂದ ಶ್ರೀಮಂತರ ಪಾಲಿನ ಆಸ್ಪತ್ರೆಯಾಗಿದ್ದು, ಬಡವರಿಗೆ ಸೂಕ್ತ ಸಮಯಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ, ದುಬಾರಿ ವೆಚ್ಚ ಭರಿಸಿ ಖಾಸಗಿ ಆಸ್ಪತ್ರೆಗೆ ಹೋಗಲಾರದೆ ಬಡ ರೋಗಿಗಳು ಪರಿತಪಿಸುವಂತಾಗಿದೆ.

ನಕಲಿ ಪತ್ರಕರ್ತರು, ಸಂಘಟನೆಗಳ ಮುಖಂಡರು ಮತ್ತು ಅದೇ ಆಸ್ಪತ್ರೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿರುವ ನೌಕರರು ಜಿಲ್ಲಾಸ್ಪತ್ರೆಯಲ್ಲಿ ದಲ್ಲಾಳಿಗಳಾಗಿ ಕೆಲಸ ಮಾಡಿ ಆಸ್ಪತ್ರೆಗೆ ಬರುವ ರೋಗಿಗಳಿಂದ ಚಿಕಿತ್ಸೆ ನೆಪದಲ್ಲಿ ಸಾವಿರಾರು ರೂ.ಗಳು ಕೀಳುತ್ತಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ಬರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಕ್ತಿಗಳು ಕೆಲ ಸಂಘಟನೆಗಳ ಹೆಸರಿನಲ್ಲಿ ಆಗಾಗ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯ ವಿರುದ್ದ ಪತ್ರಿಕಾ ಹೇಳಿಕೆಗಳು ನೀಡುವುದು, ಕೆಲ ಜನರನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಯಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆಸಿರುತ್ತಾರೆ. ಅಂತಹ ಸಂಘಟನೆಗಳವರು ನಮ್ಮ ಕೆಲಸಗಳು ಬೇಗ ಮಾಡಿಕೊಡಬೇಕು ಎಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ಬೆದರಿಸಿ ತಮಗೆ ಬೇಕಾದ ರೋಗಿಗಳಿಗೆ ಚಿಕಿತ್ಸೆ ಕೊಡಿಸಿ ವೈದ್ಯರಿಗೆ ಮತ್ತು ಸಿಬ್ಬಂದಿಗೆ ತಿಳಿಯದೆ ರೋಗಿಗಳ ಬಳಿ ಹಣ ಕೀಳುವ ಕೆಲಸ ಮಾಡುತ್ತಿದ್ದಾರೆ.

ಇನ್ನು ಕೆಲ ನಕಲಿ ಪತ್ರಕರ್ತರು ಪ್ರತಿ ನಿತ್ಯ ಆಸ್ಪತ್ರೆಯಲ್ಲಿ ಓಡಾಡಿಕೊಂಡು ಆಸ್ಪತ್ರೆಯಲ್ಲಿ ವೈದ್ಯರಿಗೆ ಮತ್ತು ಸಿಬ್ಬಂದಿಗೆ ನಾನು ಪತ್ರಕರ್ತನಾಗಿರುತ್ತೇನೆ ನಿಮ್ಮ ವಿರುದ್ದ ವರದಿ ಪ್ರಕಟಿಸುತ್ತೇನೆ ಎಂದು ಅವರನ್ನು ಬೆದರಿಸಿರುತ್ತಾರೆ. ಆ ನಕಲಿ ಪತ್ರಕರ್ತರು ಆಸ್ಪತ್ರೆಗೆ ಬರುವ ಸ್ವಲ್ಪ ಶ್ರೀಮಂತ ರೀತಿಯಲ್ಲಿ ಕಾಣುವ ರೋಗಿಗಳನ್ನು ಪರಿಚಯಿಸಿಕೊಂಡು ನೀವು ಸರತಿ ಸಾಲಿನಲ್ಲಿ ನಿಂತರೆ ನಿಮಗೆ ಸಾಯಂಕಾಲದವರೆಗೂ ಆದರೂ ಚಿಕಿತ್ಸೆ ಸಿಗುವುದಿಲ್ಲ, ನಮ್ಮ ಜೊತೆ ಬನ್ನಿ ನಿಮಗೆ ಬೇಗ ಚಿಕಿತ್ಸೆ ಕೊಡಿಸಲಾಗುವುದು ಎಂದು ಪುಸಲಾಯಿಸಿ ವೈದ್ಯರ ಬಳಿ ಹೋಗಿ ಅವರಿಗೆ ಬೇಗ ಚಿಕಿತ್ಸೆ ಕೊಡಿಸಿ ನಂತರ ಆ ರೋಗಿಗಳಿಂದ ಹಣ ಕೀಳುವ ದಂಧೆ ಮಾಡಿಕೊಂಡಿದ್ದಾರೆ.

ಈಗಾಗಲೇ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆಯಿದ್ದು, ರೋಗಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ಕೊಡುವ ಒತ್ತಡದಲ್ಲಿರುವ ವೈದ್ಯರಿಗೆ ಪ್ರತಿ ನಿತ್ಯ ದಲ್ಲಾಳಿಗಳು ಬಂದು ಒತ್ತಡ ಹಾಕುವುದು ಮತ್ತು ಮಧ್ಯವರ್ತಿಗಳು ಕರೆದು ತಂದಿರುವ ರೋಗಿಗಳಿಗೆ ವೈದ್ಯರು ಉಚಿತ ಚಿಕಿತ್ಸೆ ನೀಡಿದ್ದರೂ ವೈದ್ಯರಿಗೆ ಹಣ ನೀಡಬೇಕು ಎಂದು ರೋಗಿಗಳ ಬಳಿ ಹಣ ಪಡೆಯುತ್ತಿರುವುದರಿಂದ ಜಿಲ್ಲಾಸ್ಪತ್ರೆಯ ವೈದ್ಯರಿಗೆ ಕಳಂಕ ಬರುತ್ತಿದೆ ಎಂದು ವೈದ್ಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೋಟ್
ಜಿಲ್ಲಾ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಹೆಚ್ಚು ರೋಗಿಗಳು ಬರುವ ಕಾರಣ ರೋಗಿಯ ಪರಿಸ್ಥಿತಿಯನ್ನು ಅರಿತು ರೋಗಿಗೆ ಶಸ್ತ್ರ ಚಿಕಿತ್ಸೆಯ ದಿನಾಂಕವನ್ನು ನಿಗದಿಪಡಿಸುತ್ತೇವೆ. ಪರಿಸ್ಥಿತಿ ಗಂಭೀರವಾಗಿರುವ ರೋಗಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ, ಪರಿಸ್ಥಿತಿ ಸ್ವಲ್ಪ ಸುಧಾರಣೆಯಿರುವ ರೋಗಿಗೆ ನಂತರ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಆದರೆ ಪತ್ರಕರ್ತರ ಮತ್ತು ಸಂಘಟನೆಗಳ ಹೆಸರಿನಲ್ಲಿ ಬರುವ ವ್ಯಕ್ತಿಗಳು ಒಂದು ರೋಗಿಯನ್ನು ಕರೆದುಕೊಂಡು ಬಂದು ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಒತ್ತಡ ಹಾಕುತ್ತಾರೆ. ನಾವು ಆ ರೋಗಿಯ ಪರಿಸ್ಥಿತಿ ಸುಧಾರಣೆಯಲ್ಲಿದೆ ನಂತರ ಮಾಡಲಾಗುವುದು ಮೊದಲಿಗೆ ಪರಿಸ್ಥಿತಿ ಗಂಭೀರವಾಗಿರುವ ರೋಗಿಯ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಹೇಳಿ ವಾಪಸ್ಸು ಕಳುಹಿಸಿದರೆ ಆಸ್ಪತ್ರೆಯ ಓ.ಟಿ ಸಿಬ್ಬಂದಿಯ ಮೇಲೆ ಸುಳ್ಳು ಅಪಪ್ರಚಾರ ಮಾಡುತ್ತಾರೆ. ಇದರಿಂದ ಮನನೊಂದು ಒತ್ತಡದಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೂ ದೂರು ನೀಡಲಾಗಿದೆ.

-ಹೆಸರು ಹೇಳಲು ಇಚ್ಚಿಸದ ಆಸ್ಪತ್ರೆಯ ಸಿಬ್ಬಂದಿ.

ಕೋಟ್
ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಮಧ್ಯವರ್ತಿಗಳ ಒತ್ತಡಕ್ಕೆ ಸಿಲುಕಿ ಕೆಲಸ ಮಾಡಬೇಕಾಗಿದೆ. ಆಸ್ಪತ್ರೆಯ ವೈದ್ಯರಿಗೆ ಎಲ್ಲಾ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡುವ ಮನಸ್ಸಿದ್ದರೂ ಮಧ್ಯವರ್ತಿಗಳ ಹಾವಳಿಯಿಂದ ಹಣವಂತರು ಮಧ್ಯವರ್ತಿಗಳ ಮುಖಾಂತರ ನೇರವಾಗಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಸಂಬAಧಪಟ್ಟ ಆಸ್ಪತ್ರೆಯ ಆಡಳಿತಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಕ್ರಮ ವಹಿಸಿ ಮಧ್ಯವರ್ತಿಗಳನ್ನು ಓಡಿಸಿ ಸರ್ವರಿಗೂ ಸಮ ಚಿಕಿತ್ಸೆ ಸಿಗುವಂತೆ ಮಾಡಬೇಕಿದೆ. ಈ ಮೊದಲು ದೇವರಾಜ್ ರವರು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾಗಿದ್ದಾಗ ಎಸ್.ಎನ್.ಆರ್ ಆಸ್ಪತ್ರೆಯ ಮೇಲೆ ದಾಳಿ ಮಾಡಿ ಮಧ್ಯವರ್ತಿಗಳ ಮೇಲೆ ದೂರು ದಾಖಲಿಸಿದ್ದರು. ಅವರ ಅವಧಿಯಲ್ಲಿ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿತ್ತು. ಆವರು ಬೇರೆ ಕಡೆ ವರ್ಗಾವಣೆಯಾದ ನಂತರ ಮತ್ತೆ ಶುರು ಮಾಡಿಕೊಂಡಿದ್ದಾರೆ. ಈಗಿರುವ ಪೊಲೀಸ್ ವರಿಷ್ಟಾಧಿಕಾರಿಗಳು ಸ್ವಲ್ಪ ಕ್ರಮ ವಹಿಸಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿ ಎಲ್ಲಾ ರೋಗಿಗಳಿಗೂ ಸಮಾನ ಚಿಕಿತ್ಸೆ ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ಒತ್ತಡದಿಂದ ವಿಮುಕ್ತಿಗೊಳಿಸಬೇಕಿದೆ.

-ಮುನಿವೆಂಕಟೇಶ್, ಹಿರಿಯ ನಾಗರೀಕ, ಕೋಲಾರ.

ಚಿತ್ರ ೧೫ ಕೆ.ಎಲ್.ಆರ್. ೦೧ : ಎಸ್.ಎನ್.ಆರ್.ಆಸ್ಪತ್ರೆಯ ಭಾವಚಿತ್ರ
ಚಿತ್ರ ೧೫ ಕೆ.ಎಲ್.ಆರ್. ೦೧ಎ : ಮುನಿವೆಂಕಟೇಶ್, ಹಿರಿಯ ನಾಗರೀಕ, ಕೋಲಾರ.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…