ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಹಾಲು ಒಕ್ಕೂಟದ ಚುನಾವಣೆಗೆ ಸಂಬAಧಿಸಿದAತೆ ಹೂಡಿದ್ದ ದಾವೆಯನ್ನು ಹೈಕೋರ್ಟ್ ವಜಾ ಮಾಡಿ, ಕೂಡಲೇ ವಿಶೇಷ ಸರ್ವ ಸದಸ್ಯರ ಸಭೆ ಕರೆದು ಚುನಾವಣೆ ನಡೆಸುವ ಸಂಬAಧ ಮುಂದಿನ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದೆ.
ಸಾಮಾನ್ಯ ಸಭೆ ಕರೆದು ಕ್ಷೇತ್ರ ವಿಂಗಡಣೆಯನ್ನು ಸಮರ್ಪಕವಾಗಿ ಮಾಡದೆ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಕೋಲಾರ ತಾಲ್ಲೂಕಿನ ಬೆಳಗಾನಹಳ್ಳಿ ಮತ್ತು ಯಾನಾದಹಳ್ಳಿ ಡೈರಿ ಪ್ರತಿನಿಧಿಗಳು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಧೀಶರಾದ ಸೂರಜ್ ಗೋವಿಂದರಾಜು ಸರ್ವ ಸದಸ್ಯರ ಸಭೆ ಕರೆಯುವಂತೆ ಆದೇಶ ನೀಡಿದ್ದರು.
ಇದಾದ ನಂತರ ಮುಳಬಾಗಿಲು ತಾಲ್ಲೂಕಿನ ಪಂಬರಹಳ್ಳಿ ಹಾಗೂ ಪೆರಮಾಕಲಹಳ್ಳಿ ಡೈರಿ ಪ್ರತಿನಿಧಿಗಳು ಸಹಕಾರ ಇಲಾಖೆಯ ಜಂಟಿ ನಿಬಂಧಕರು ಹೊರಡಿಸಿದ್ದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್ ಜಂಟಿ ನಿಬಂಧಕರ ಆದೇಶ ಕುರಿತು ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಿಸಿ ನಿರ್ಧಾರ ಕೈಗೊಳ್ಳಲು ಸೂಚಿಸಿದೆ. ಮತ್ತು ದಾವೆ ಹೂಡಿದ್ದ ಪಂಬರಹಳ್ಳಿ ಮತ್ತು ಪೆರಮಾಕಲಹಳ್ಳಿ ಡೈರಿ ಪ್ರತಿನಿಧಿಗಳಿಗೆ ತಲಾ ೨೫ ಸಾವಿರ ರೂ.ಗಳ ದಂಡ ವಿಧಿಸಿದೆ.
ಚಿತ್ರ ೧೫ ಕೆ.ಎಲ್.ಆರ್. ೦೨ : ಕೋಚಿಮುಲ್ ಭಾವಚಿತ್ರ