ಕೋಟೆನಗರಿ ರಂಗೀನಾಟ ಆರಂಭ..!

blank

ಬಾಗಲಕೋಟೆ: ದೇಶದಲ್ಲಿಯೆ ಖ್ಯಾತಿ ಪಡೆದಿರುವ ಬಾಗಲಕೋಟೆ ಹೋಳಿ ಹಬ್ಬದ ರಂಗೀನಾಟ ಮೊದಲ ದಿನ ಶುಕ್ರವಾರ ಅದ್ಧೂರಿಯಾಗಿ ಆರಂಭವಾಗಿದ್ದು, ಕೋಟೆನಗರಿ ಸಂಭ್ರಮದಲ್ಲಿ ತೆಲುವಂತೆ ಮಾಡಿತು. ಮುಳಗಡೆಯಾದ ಬಳಿಕ ಅಽಕೃತವಾಗಿ ನವನಗರ-ವಿದ್ಯಾಗಿರಿ ಭಾಗದಲ್ಲಿ ಹಮ್ಮಿಕೊಂಡಿದ್ದ ಬಣ್ಣದಾಟ ಹೋಳಿ ಉತ್ಸವದ ಸಂತಸ ಇಮ್ಮಡಿಗೊಳಿಸಿತ್ತು.

ಬೆಳಗ್ಗೆ ೯ ಗಂಟೆಗೆ ನವನಗರ, ವಿದ್ಯಾಗಿರಿ, ಹಳೇ ಬಾಗಲಕೋಟೆ ನಗರದಲ್ಲಿ ಬಣ್ಣದಾಟ ಆರಂಭಗೊAಡಿತು. ಯುವಕರು, ಮಹಿಳೆಯರು, ಹಿರಿಯರು ಹಲಗೆ ಸಂಭ್ರಮದಿAದ ಪಾಲ್ಗೊಂಡಿದ್ದರು. ೧೨.೩೦ ಗಂಟೆಗೆ ಬಳಿಕ ನವನಗರ, ವಿದ್ಯಾಗಿರಿ ಬಣ್ಣದಲೋಕ ಸೃಷ್ಟಿಯಾಯಿತು.

ನವನಗರದ ಜಿಹವೇಶ್ವರ ದೇವಸ್ಥಾನದಿಂದ ನವನಗರದ ಜನತೆ, ವಿದ್ಯಾಗಿರಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ವಿದ್ಯಾಗಿರಿ ಜನತೆ ಬಣ್ಣದ ಬಂಡಿಗಳ ಮೆರವಣಿಗೆ ಆರಂಭಿಸಿದರು. ನೂರಾರು ಸಂಖ್ಯೆಯಲ್ಲಿದ್ದ ಟ್ಯಾಕ್ಟರ್, ಎತ್ತಿನ ಬಂಡಿಗಳಲ್ಲಿ ತುರಾಯಿ ಹಲಗೆ ನೇತೃತ್ವ ಮೆರವಣಿಗೆ ನೋಡುಗರಿಗೆ ಗಮನ ಸೆಳೆಯಿತು. ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ ವೃತ್ತ, ನಗರಸಭೆ, ಬಸವೇಶ್ವರ ಸಹಕಾರಿ ಬ್ಯಾಂಕ್ ರಸ್ತೆಯಲ್ಲಿ ಪರಸ್ಪರ ಸಮಾಗಮಗೊಳ್ಳುವ ದೃಶ್ಯ ಬಾಗಲಕೋಟೆ ಹೋಳಿ ಗತವೈಭವ ಸಾರಿತು.

ಇನ್ನು ಮೊದಲ ದಿನದ ಕಿಲ್ಲಾಗಲ್ಲಿಯ ರಂಗೀನಾಟ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಠಿಸಿತು. ಮಹಿಳೆಯರು, ಮಕ್ಕಳು, ಯುವಕರು ಬಣ್ಣದೋಕುಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರಮುಖ ಜನದಟ್ಟನೆ ಪ್ರದೇಶಗಳಲ್ಲಿ ಓಕುಳಿ ಆಡಿ ಯುವಕರು ಸಂಭ್ರಮಿಸಿದರು.

ರಂಗೀನ ಆಟದ ಪರಿಣಾಮ ಇಡೀ ಬಾಗಲಕೋಟೆ ವ್ಯಾಪಾರ ವಹಿವಾಟು ಸ್ವಯಂ ಘೋಷಿತ ಬಂದ್‌ನAತೆ ಕಾಣಿಸಿತು. ಬಸ್ ನಿಲ್ದಾಣ, ರೈಲು ನಿಲ್ದಾನ ಪ್ರಮುಖ ಪ್ರದೇಶಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಬೆಳಗ್ಗಯಿಂದ ಮಕ್ಕಳು ಹಲಿಗೆ ಬಾರಿಸುವುದು ಬಣ್ಣ ಆಡುವುದು ಸಾಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಪಲ್ಪ ಹೆಚ್ಚು ರಂಗು ಕಾಣಿಸಿತು. ಬಣ್ಣದ ನೀರು ತುಂಬಿಕೊAಡು ಪ್ರಮುಖ ರಸ್ತೆಗಳಲ್ಲಿ ಓಕುಳಿಯಾಡುತ್ತ ಜನರನ್ನು ರಂಜಿಸಿದರು.

ಬಸವೇಶ್ವರ ವೃತ್ತ ಹಾಗೂ ಕಾಲೇಜು ವೃತ್ತದಲ್ಲಿ ಬಂಡಿಗಳ ಜೊತೆಗೆ ನೂರಾರು ಯುವಕರು ಸೇರಿಕೊಂಡು ಪ್ರದೇಶವನ್ನು ಕಲರ್-ÀÅಲ್ ಮಾಡಿದರು. ಪರಸ್ಪರ ಬಣ್ಣದ ನೀರು ಎರೆಚುತ್ತ ಸಂಭ್ರಮಿಸಿದರು. ಸಡಗರದಲ್ಲಿ ಹಲಿಗೆ ಸಪ್ಪಳವೂ ಸೇರಿಕೊಂಡು ಹಬ್ಬದ ರಂಗೇರಿತು. ವಿವಿಧ ಬಡಾವಣೆಗಳಲ್ಲಿ ಯುವತಿಯರು ಪರಸ್ಪರ ಗುಲಾಲ್ ಎರಚಿ ಹಬ್ಬಕ್ಕೆ ಕಳೆ ತಂದರು. ವಿಭಿನ್ನ ವೇಷ, ಪೋಷಾಕು ಧರಿಸಿದ್ದ ಯುವಕರು ನಾನಾ ರೀತಿಯ ನಟನೆ ಮಾಡುತ್ತಾ ಗಮನ ಸೆಳೆದರು. ಬಣ್ಣದ ಬಂಡಿಗಳ ಜೊತೆ ಕೇಕೇ ಹಾಕುತ್ತಾ ಯುವಕರು ಸಾಗಿದರು. ಆಕರ್ಷಕ ಸಾಂಪ್ರದಾಯಕ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಮೊದಲ ದಿನ ಕೋಟೆನಗರಿ ರಂಗೀನಾಟ ನೋಡುಗರನ್ನು ಸೆಳೆಯಿತು.

Share This Article

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…