More

  ಕೋಟೆನಗರಿಯಲ್ಲಿ ನಾರಿಯರ ಓಟ ಸಂಭ್ರಮ…!

  ಬಾಗಲಕೋಟೆ: ಆಟ, ಓಟಕ್ಕೂ ಬೇಕು ಟ್ರ‍್ಯಾಕ ಸೋಟ, ಪ್ಯಾಂಟ್. ಜೀಮ್, ವ್ಯಾಯಾಮಕ್ಕೂ ಬೇಕು ನವನವೀನ ಡ್ರೇಸ್. ಆದರೇ ಇಲ್ಲಿ ನಾರಿಯರು ಸಾಂಪ್ರದಾಯಿಕ ಸೀರೆ ತೊಟ್ಟು ಕಿ.ಮೀ ಗಟ್ಟಲೆ ಓಟ ಓಡಿ ವಿಶೇಷತೆಗೆ ಸಾಕ್ಷಿಯಾಗಿದ್ದಾರೆ..!

  ರಿಯಲ್ ಸ್ಪೋರ್ಟ್ಸ್ ಸಂಸ್ಥೆಯು ಅಖಿಲ ಭಾರತೀಯ ಸ್ಥಳೀಯ ಸಂಸ್ಥೆಗಳ ಸಂಘ ಹಾಗೂ ಕರ್ನಾಟಕ ಸಫಾಯಿ ಕರ್ಮಚಾರಿ ಪರಿಷತ್ತಿನ ಸಹಯೋಗದಲ್ಲಿ ಭಾನುವಾರ ನವನಗರದ ಜಗದ್ಗುರು ಸಿದ್ದರಾಮೇಶ್ವರ ಮಠ ಭೋವಿಪೀಠದಿಂದ ಹಮ್ಮಿಕೊಂಡಿದ್ದ `ದಿ ಗ್ರೇಟ್ ಬಾಗಲಕೋಟೆ ಮಾನ್ಸೂನ್ ೧೦ಕೆ ರನ್’ನಲ್ಲಿ ಕಂಡು ಬಂದ ಸಂಭ್ರಮದ ಕ್ಷಣಗಳಿವು.

  ಸಾಮಾನ್ಯವಾಗಿ ಸೀರೆ ಧರಿಸಿ ಓಡುವುದು ದುರ್ಲಭ. ಆದರೇ ಈ ೧೦ ಕೆ ರನ್ ಕಾರ್ಯಕ್ರಮದಲ್ಲಿ ಸೀರೆ ಧರಿಸಿದರು ಮಹಿಳೆಯರು ಓಟ ಮಾತ್ರ ನಿಲ್ಲಲಿಲ್ಲ. ನಿಗದಿತ ಗುರಿ ತಲುಪುವ ವರೆಗೂ ಹುರುಪ ಕಡಿಮೆಯಾಗಲಿಲ್ಲ.

  ರಿಯಲ್ ಸ್ಟೋಟ್ಸ್ ಸಂಸ್ಥೆ ಹಮ್ಮಿಕೊಳ್ಳುವ ನಾಲ್ಕನೇ ಆವೃತ್ತಿಯ ಮ್ಯಾರಾಥಾನ ಇದಾಗಿದ್ದು, ಸಂಪ್ರದಾಯಿಕ ಊಡುಗೆಯಲ್ಲಿ ಮಹಿಳೆಯರು ಮಿಂಚಿದರು. ಇಳಕಲ್ಲ ಸೀರೆ ತೊಟ್ಟಿದ್ದ ಮಹಿಳೆಯರು ಬೆಳಗಿನ ಚುಮು ಚುಮು ಚಳಿಯ ನಡುವೆ ಓಡಿದರು. ರಸ್ತೆಯ ಅಕ್ಕಪಕ್ಕದಲ್ಲಿ ನಿಂತವರು ನಿಬ್ಬೆರಗಾದವರು. ವಯಸ್ಸಿನ ಬೇಧ ಇಲ್ಲದೆ ಎಲ್ಲ ವಯೋಮಾನದ ಮಹಿಳೆಯರು ಭಾಗವಹಿಸಿದ್ದು ಗಮನ ಸೆಳೆಯಿತು.

  ಅಲ್ಲದೆ ೩ ಕೆ, ೫ಕೆ ಹಾಗೂ ೧೦ಕೆ ಮ್ಯಾರಾಥಾನ್‌ಗಳಲ್ಲೂ ಜನ ವಯಸ್ಸಿನ ಹಂಗು ತೊರೆದು ಭಾಗವಹಿಸಿ ತಮ್ಮ ಫಿಟ್ನೆಸ್ ಪ್ರದರ್ಶಿಸಿದರು. ಈ ಬಾರಿ ಆರೋಗ್ಯ ಮತ್ತು ಮಹಿಳಾ ಸಬಲೀಕರಣದ ಶೀರ್ಷಿಕೆಯಡಿಲ್ಲಿ ಮ್ಯಾರಾಥಾನ್ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಅಲ್ಟ್ರಾ ಮ್ಯಾರಥಾನ್ ಓಟಗಾರ ಅರುಣ ಭಾರಧ್ವಾಜ್, ರಷ್ಯಾ ದೇಶದ ಮಾಸ್ಕೋದ ಮ್ಯಾರಥಾನ್ ಚಾಂಪಿಯನ್ ಅಲೆಕ್ಸಂದ್ರಾ ಅಫಾನಾಸೊವಾ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದು ಆಕರ್ಷಕವಾಗಿತ್ತು.

  See also  ಧಗಧಗಿಸುವ ಬಿಸಿಲಲ್ಲೂ ಪಾದಯಾತ್ರೆ

  ಜಿಲ್ಲಾಽಕಾರಿ ಜಾನಕಿ ಕೆ.ಎಂ, ವಿಜಯಪುರ ಮಹಿಳಾ ವಿವಿ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶನ್, ಎಸ್ಪಿ ಅಮರನಾಥ ರೆಡ್ಡಿ, ಜಿ.ಪಂ ಸಿಇಒ ಶಶಿಧರ ಕುರೇರ, ಜಗದೀಶ ಹಿರೇಮನಿ, ಪ್ರವೀಣ ಸೋಲಂಕಿ, ಶಿವಕುಮಾರ ಸುರಪುರಮಠ, ವಿಂದ್ಯಾ ಸರದೇಸಾಯಿ, ಗೀತಾ ಗಿರಜಾ, ರಕ್ಷಿತಾ ಭರತಕುಮಾರ ಈಟಿ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts