ಕೋಲಾರಮ್ಮಗೆ ಪ್ರಾರ್ಥನೆ

ಕೋಲಾರ: ಕೆಸಿ ವ್ಯಾಲಿಗೆ ನೀಡಿರುವ ಕೋರ್ಟ್ ತಡೆಯಾಜ್ಞೆ ತೆರವುಗೊಂಡು ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಗೊಂಡು ಜಿಲ್ಲೆಯ ಬರದ ಬವಣೆ ನೀಗಲಿ ಎಂದು ಪ್ರಾರ್ಥಿಸಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದಿಂದ ಶುಕ್ರವಾರ ಕೋಲಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ಮುಂದೆ 1001 ತೆಂಗಿನಕಾಯಿ ಒಡೆದು ಹರಿಕೆ ಸಲ್ಲಿಸಲಾಯಿತು.

ಕೆಸಿ ವ್ಯಾಲಿ ವಿಚಾರವಾಗಿ ಸುಪ್ರೀಂಕೋರ್ಟ್​ನಲ್ಲಿ ಮಾ.25ರಂದು ಕೇಸು ನಡೆಯಲಿದ್ದು, ತಡೆಯಾಜ್ಞೆ ತೆರವಾಗಲಿ ಎಂದು ಪ್ರಾರ್ಥಿಸಲು ಈ ಪೂಜೆ ಹಮ್ಮಿಕೊಳ್ಳಲಾಗಿದೆ. ಕೆಸಿ ವ್ಯಾಲಿಯಿಂದ ಕನಿಷ್ಠ ಕೆರೆಗಳು ತುಂಬಿದರೆ ಅಂತರ್ಜಲ ವೃದ್ದಿಯಿಂದ ಕೊಳವೆಬಾವಿ ಮರುಪೂರಣವಾಗಿ ರೈತರ ಸಮಸ್ಯೆಗೆ ಪರಿಹಾರ ಸಿಗಲಿದೆ. ಹಾಗಾಗಿ ಪರಿಹಾರಕ್ಕೆ ಪ್ರಾರ್ಥಿಸಿ 1001 ತೆಂಗಿನ ಕಾಯಿ ಒಡೆಯುತ್ತಿರುವುದಾಗಿ ಮಹಿಳಾ ಒಕ್ಕೂಟದ ಮುಖಂಡರಾದ ವಿ.ಅನಿತಾ ತಿಳಿಸಿದರು. ಒಕ್ಕೂಟದ ಸದಸ್ಯೆ ರಾಣಿ ಇತರರು ಇದ್ದರು.