More

  ಕೋರ್ಟ್​ಗೆ ಹಾಜರಾದ ಅಸ್ನೋಟಿಕರ್

  ರಾಣೆಬೆನ್ನೂರ: ರಿವಾಲ್ವಾರ್ ಹಾಗೂ ಕಾರು ಸೀಜ್ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಿಮಿತ್ತ ಮಾಜಿ ಸಚಿವ ಆನಂದ ಅಸ್ನೋಟಿಕರ್ ಗುರುವಾರ ಇಲ್ಲಿಯ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರಾದರು. 2019ರ ಲೋಕಸಭಾ ಚುನಾವಣೆ ವೇಳೆ ತಾಲೂಕಿನ ಮಾಕನೂರ ಚಕ್ ಪೋಸ್ಟ್ ಬಳಿ ಆನಂದ ಅಸ್ನೋಟಿಕರ್ ಅವರಿಗೆ ಸೇರಿದ ಕಾರಿನಲ್ಲಿ ಪರವಾನಗಿ ನವೀಕರಣಗೊಳ್ಳದ ರಿವಾಲ್ವಾರ್ ದೊರೆತಿತ್ತು. ಈ ಕುರಿತು ಚುನಾವಣಾಧಿಕಾರಿಗಳು ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆನಂದ ಅಸ್ನೋಟಿಕರ್ ಸರಿಯಾದ ದಾಖಲಾತಿ ಇದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

  ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಸ್ನೋಟಿಕರ್, ಪ್ರಕರಣದ ಕುರಿತು ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಆದ್ದರಿಂದ ನ್ಯಾಯ ಸಿಕ್ಕಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts