ಕೊಹ್ಲಿ, ರವಿಶಾಸ್ತ್ರಿಗೆ ಗೌರವ ಸದಸ್ಯತ್ವ

ಸಿಡ್ನಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿಗೆ ಕ್ರಿಕೆಟ್​ಗೆ ನೀಡಿದ ಸೇವೆಯ ಸಲುವಾಗಿ ಸಿಡ್ನಿ ಕ್ರಿಕೆಟ್ ಮೈದಾನದ ಗೌರವ ಸದಸ್ಯತ್ವ ಲಭಿಸಿದೆ. ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಕ್ರಿಕೆಟ್​ಗೆ ನೀಡಿದ ಸೇವೆಗಾಗಿ ಕೊಹ್ಲಿ ಹಾಗೂ ರವಿಶಾಸ್ತ್ರಿಗೆ ಈ ಗೌರವ ನೀಡಲಾಗುತ್ತಿದೆ ಎಂದು ಎಸ್​ಸಿಜಿ ಚೇರ್ಮನ್ ಟೋನಿ ಶೆಫರ್ಡ್ ತಿಳಿಸಿದ್ದಾರೆ. ಕೊಹ್ಲಿ, ರವಿಶಾಸ್ತ್ರಿ ಅಲ್ಲದೆ ಎಸ್​ಸಿಜಿಯ ಗೌರವ ಸದಸ್ಯತ್ವ ಪಡೆದ ಇತರ ಕ್ರಿಕೆಟಿಗರೆಂದರೆ ಸಚಿನ್ ತೆಂಡುಲ್ಕರ್ ಹಾಗೂ ಬ್ರಿಯಾನ್ ಲಾರಾ.

Leave a Reply

Your email address will not be published. Required fields are marked *