ಕೊಳ್ಳೇಗಾಲ : ಪಟ್ಟಣದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ತೆರೆದಿರುವ ಪಟಾಕಿ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಗುರುವಾರ ಜೋರಾಗಿತ್ತು.
ಸರ್ಕಾರ ಹಸಿರು ಪಟಾಕಿಯನ್ನು ಕಡ್ಡಾಯಗೊಳಿಸಿದ್ದು, ಮಳಿಗೆಗಳಲ್ಲಿ ಹಸಿರು ಪಟಾಕಿ ಲೇಬಲ್ ಹೊಂದಿರುವ ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಎಂಜಿಎಸ್‌ವಿ ಮೈದಾನದಲ್ಲಿ 7 ಮಳಿಗೆಗಳನ್ನು ತೆರೆಯಲಾಗಿದ್ದು. ಬಗೆಬಗೆಯ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಕೊಳ್ಳೇಗಾಲ ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಂದ ಜನರು ಆಗಮಿಸಿ ಪಟಾಕಿ ಮಳಿಗೆಗಳಿಗೆ ಮುಗಿ ಬೀಳುತ್ತಿದ್ದು, ಪಾಲಕರು ಮನೆಯ ಮ ಕ್ಕಳಿಗೆ ಅಗತ್ಯವಿರುವ ಪಟಾಕಿ ಖರೀದಿಸಿದರು. ಯುವಕರು, ಮಕ್ಕಳು ಪಟಾಕಿ ಖರೀದಿಸಿ ಸಂಭ್ರಮಿಸಿದರು. ಮನೆಗಳ ಮುಂದೆ ದೀಪ ಬೆಳಗಿಸಿದರು.
TAGGED:Kollegala news