22.8 C
Bengaluru
Saturday, January 18, 2020

ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಡಿತ

Latest News

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ಬ್ಯಾಡಗಿ: ಹೆಸ್ಕಾಂ ಎಡವಟ್ಟಿನಿಂದಾಗಿ ದಲಿತ ಕುಟುಂಬವೊಂದು ಕಳೆದ 8 ವರ್ಷದಿಂದ ಕೃಷಿ ಚಟುವಟಿಕೆಗೆ ನೀರಾವರಿ ಸೌಲಭ್ಯದಿಂದ ದೂರ ಉಳಿಯುವಂತಾಗಿದೆ.

ತಾಲೂಕಿನ ಹಿರೇಹಳ್ಳಿ ಗ್ರಾಮದ ದಲಿತ ಸಮುದಾಯದ ಎನ್.ಎಫ್. ಹರಿಜನ ಹಾಗೂ ಅವರ ನಾಲ್ವರು ಸಹೋದರರಿಗೆ 1994 ರಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಸರ್ಕಾರ ಕೊಳವೆಬಾವಿ ಸೌಲಭ್ಯ ಕಲ್ಪಿಸಿ, ಕೃಷಿ ಚಟುವಟಿಕಗೆ ನೀರಾವರಿಗೆ ಅನುಕೂಲ ಮಾಡಿಕೊಟ್ಟಿತ್ತು. ಸಹೋದರರ ಹೆಸರಲ್ಲಿ ಸ.ನಂ. 188/1 ಹಾಗೂ 86/1 ರಲ್ಲಿ 2.30 ಗುಂಟೆ ಜಮೀನಿದ್ದು, ಒಕ್ಕಲುತನ ನಡೆಸಿಕೊಂಡು ಬರುತ್ತಿದ್ದರು. ಇದಾದ 18 ವರ್ಷಗಳ ನಂತರ 2012ರಲ್ಲಿ ಹೆಸ್ಕಾಂ ಏಕಾಏಕಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಪರಿಣಾಮ ಕೃಷಿಯಲ್ಲಿ ತೊಡಗಿದ್ದ ಕುಟುಂಬಗಳು ಅಕ್ಷರಶಃ ಬೀದಿಯಲ್ಲಿ ನಿಲ್ಲುವಂತಾಗಿದೆ.

ಹೆಸ್ಕಾಂ ಅಧಿಕಾರಿಗಳು ರೈತನಿಗೆ ನೋಟಿಸ್ ಕೂಡ ನೀಡದೆ, ಹೊಲದಲ್ಲಿನ ವಿದ್ಯುತ್ ಕಂಬ, ತಂತಿಗಳನ್ನು ಏಕಾಏಕಿ ಕಿತ್ತುಕೊಂಡು ಹೋಗಿದ್ದಾರೆ. ಕೊಳವೆಬಾವಿ ಸಂಪರ್ಕ ಏಕೆ ಕಿತ್ತು ಹಾಕಲಾಗಿದೆ ಎಂದು ಪ್ರಶ್ನಿಸಿದರೆ, ಅಧಿಕಾರಿಗಳ ಬಳಿ ಸಮರ್ಪಕ ಉತ್ತರವಿಲ್ಲ. ಸರ್ಕಾರಗಳು ಹಿಂದುಳಿದ, ದಲಿತ ವರ್ಗಗಳ ಕಲ್ಯಾಣ ಹಾಗೂ ಸುಧಾರಣೆಗೆ ಹಲವು ಯೋಜನೆ ಜಾರಿಗೊಳಿಸಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನ, ನಿರ್ಲಕ್ಷ್ಯದಿಂದ ದುರ್ಬಲ ವರ್ಗದವರಿಗೆ ಸಮರ್ಪಕ ಯೋಜನೆಗಳು ತಲುಪದೆ ಬೀದಿಗೆ ನಿಲ್ಲುವಂತಾಗಿದೆ.

ದಲಿತ ಏಳ್ಗೆಗೆ ಗಂಗಾ ಕಲ್ಯಾಣ ಯೋಜನೆ ಮೂಲಕ ಕೊಳವೆಬಾವಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಆದರೆ, ಸ್ಥಳೀಯ ಅಧಿಕಾರಿಗಳು ವಿನಾಕಾರಣ ನಮ್ಮ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದು, ಅಳವಡಿಸಿದ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಕಿತ್ತುಕೊಂಡು ಹೋಗಿರುವುದು ಕಾನೂನು ಉಲ್ಲಂಘನೆಯಾಗಿದೆ. ದುಡಿದು ತಿನ್ನುವ ಬಡ ಕುಟುಂಬಗಳಿಗೆ ತೊಂದರೆ ನೀಡಿದ ಹೆಸ್ಕಾಂ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. 2012 ರಿಂದ 2019 ರವರೆಗೆ ವರ್ಷಕ್ಕೆ 2 ಲಕ್ಷ ರೂ.ನಂತೆ 8 ವರ್ಷಗಳ ನಷ್ಟವನ್ನು ಸಂಬಂಧಿಸಿದ ಅಧಿಕಾರಿಗಳು ಭರಿಸಬೇಕು. ಇಲ್ಲವಾದಲ್ಲಿ ಬ್ಯಾಡಗಿ ಹೆಸ್ಕಾಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುತ್ತೇವೆ.
| ಎನ್.ಎಫ್. ಹರಿಜನ, ಗಂಗಾ ಕಲ್ಯಾಣ ಯೋಜನೆ ಫಲಾನುಭವಿ


ಹಿಂದಿನ ಇಂಜಿನಿಯರ್ ಅವಧಿಯಲ್ಲಿ ಘಟನೆ ಜರುಗಿದ್ದು, ನನ್ನ ಗಮನಕ್ಕೆ ಇತ್ತೀಚೆಗೆ ಬಂದಿದೆ. ಕಾನೂನು ಪ್ರಕಾರ ರೈತರ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕಕ್ಕೆ ಅವಕಾಶವಿದೆ. ಸಿಬ್ಬಂದಿ ಕಳುಹಿಸಿ ತಕ್ಷಣ ಸಂಪರ್ಕ ನೀಡಲಾಗುವುದು.
| ಹಾಲೇಶ ಅಂತರವಳ್ಳಿ ಹೆಸ್ಕಾಂ ಇಂಜಿನಿಯರ್ ಬ್ಯಾಡಗಿ


2012ರಲ್ಲಿ ಎಚ್​ಯುುಡಿಎಫ್ ಯೋಜನೆಯಲ್ಲಿ ವಿದ್ಯುತ್ ಕಾಮಗಾರಿ ನಡೆಸುವ ವೇಳೆ ವಿದ್ಯುತ್ ಕಂಬ ಕೀಳಲಾಗಿದೆ. ಹಿರೇಹಳ್ಳಿ ಸುತ್ತಮುತ್ತಲ ರೈತರಿಗೆ 30 ರಿಂದ 150 ಟಿಸಿ ಹೆಚ್ಚಿಸಿದೆ. ಇವರ ಹೊಲದಿಂದ 20 ಅಡಿ ಅಂತರದಲ್ಲಿ ವಿದ್ಯುತ್ ಕಂಬವಿದ್ದು, ಸರ್ವೀಸ್ ಪಡೆಯಬಹುದಾಗಿದೆ.
| ಎಸ್.ಬಿ. ಹೊಳೆಯಣ್ಣನವರ ಹೆಸ್ಕಾಂ ರಾಣೆಬೆನ್ನೂರ ಇಂಜಿನಿಯರ್ (ಹಿಂದೆ ಬ್ಯಾಡಗಿಯಲ್ಲಿ ಇದ್ದರು.)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...