ಬೋರಗಾಂವ, ಬೆಳಗಾವಿ: ಉದ್ಯಮಿ ಅಭಿನಂದನ ಪಾಟೀಲ ಅವರ 47ನೇ ಜನ್ಮದಿನದ ಅಂಗವಾಗಿ ಸಿಪ್ಪಾಣಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅರಿಹಂತ ಟ್ರೋಫಿ ಅಂತಾರಾಜ್ಯ ಮಟ್ಟದ ಫುಟ್‌ಬಾಲ್ ಸ್ಫರ್ಧೆಯಲ್ಲಿ ಕೊಲ್ಲಾಪುರದ ಬಾಲಗೋಪಾಲ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಅರಿಹಂತ ಟ್ರೋಫಿ ಹಾಗೂ 1 ಲಕ್ಷ ರೂ. ನಗದು ಬಹುಮಾನ ತನ್ನದಾಗಿಸಿಕೊಂಡಿತು.
ದೀವ್-ದಮನ್ ಸಿಲ್ವಾ ಯುನೈಟೆಡ್ ತಂಡ 75 ಸಾವಿರ ರೂ. ಬಹುಮಾನದೊಂದಿಗೆ ದ್ವಿತೀಯ ಸ್ಥಾನ, ಗಡಿಂಗ್ಲಜದ ಕೆ.ಬಿ.ಆರ್ ಫುಟ್‌ಬಾಲ್ ತಂಡ 25 ಸಾವಿರ ರೂ. ನಗದಿನೊಂದಿಗೆ ತೃತೀಯ ಹಾಗೂ ಬೆಳಗಾವಿ ಬ್ರದರ್ಸ್ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ವಿಜೇತರಿಗೆ ಬೋರಗಾಂವ ಪಿಕೆಪಿಎಸ್ ಅಧ್ಯಕ್ಷ ಉತ್ತಮ ಪಾಟೀಲ, ಮಾಜಿ ಶಾಸಕ ಸುಭಾಷ ಜೋಶಿ, ನಗರಸೇವಕ ವಿಲಾಸ ಗಾಡಿವಡ್ಡರ, ಧನಂಜಯ ಮಾನವಿ, ಸಂಜಯ ಸಾಂಗಾವಕರ, ನಿರಂಜನ ಪಾಟೀಲ ಸರಕಾರ ಇತರರು ಬಹುಮಾನ ವಿತರಿಸಿದರು.
ಪೃಥ್ವಿರಾಜ ಪಾಟೀಲ, ಡಾ. ಸುನೀಲ ಸಸೆ, ರಾಜು ಪಾಟೀಲ ಅಕ್ಕೋಳ, ಪ್ರಕಾಶ ಗಾಯಕವಾಡ, ಚೇತನ ಸ್ವಾಮಿ, ನಿರಂಜನ ಪಾಟೀಲ, ಡಾ. ಜಸವರಾಜ ಗಿರಿ, ಗಜಾನನ ಕಾವಡಕರ, ಅರುಣ ನಿಕಾಡೆ, ಶಿವಗೌಡ ಪಾಟೀಲ, ಸಂಜಯ ಪಾವಲೆ, ಅರುಣ ನಿಕಾಡೆ, ಅಭಯಕುಮಾರ ಮಗದುಮ್ಮ, ದತ್ತ ನಾಯಿಕ, ಸಚಿನ ಪವಾರ, ರಘುನಾಥ ಚೌಗುಲೆ, ಅಶೋಕ ಬಂಕಾಪುರೆ, ದಿಲೀಪ ಪಠಾಡೆ, ಓಂಕಾರ ಶಿಂಧೆ, ಸಚಿನ ಪುಟಾನಕರ ಇತರರಿದ್ದರು.