More

  ಕೊಲೆಗಾರನಿಗೆ ಕಠಿಣ ಶಿಕ್ಷೆಯಾಗಲಿ

  ಕೊಪ್ಪಳ: ಹುಬ್ಬಳ್ಳಿ ಯುವತಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದವನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಯುವತಿ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೊಪ್ಪಳ ಜಿಲ್ಲಾ ಗಂಗಾಮತಸ್ಥರ ಸಂದ ಅಧ್ಯಕ್ಷ ಸೋಮಣ್ಣ ಬಾರಕೇರ ಒತ್ತಾಯಿಸಿದರು.

  ಹುಬ್ಬಳ್ಳಿಯಲ್ಲಿ ಕೆಲ ದಿನಗಳ ಹಿಂದಷ್ಟೇ ನೇಹಾ ಹತ್ಯೆ ನಡೆದಿದೆ. ಈ ಟನೆ ಮಾಸುವ ಮುನ್ನವೇ ಅಂಜಲಿ ಕೊಲೆ ಆಗಿದೆ. ತನ್ನನ್ನು ಪ್ರೀತಿಸುವಂತೆ ಕೊಲೆಗಾರ ಗಿರೀಶ ಸಾವಂತ ಹುಡಿಗಿಗೆ ಪೀಡಿಸಿದ್ದಾನೆ. ಒಪ್ಪದಿದ್ದಾಗ ನೇಹಾ ಹತ್ಯೆ ಮಾಡಿದಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಅಂಜಲಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೂ ಕ್ರಮ ಕೈಗೊಳ್ಳದ ಕಾರಣ ಯುವತಿ ಕೊಲೆಯಾಗಿದ್ದಾಳೆ. ಕೊಲೆಗೆ ಪೊಲೀಸ್​ ಇಲಾಖೆ ಹಾಗೂ ಸರ್ಕಾರದ ವೈಲ್ಯವೇ ಕಾರಣವೆಂದು ಆರೋಪಿಸಿದರು.

  ಕೊಲೆಗಾರನಿಗೆ ಕಠಿಣ ಶಿಕ್ಷೆಯಾಗಬೇಕು. ಎಲ್ಲ ಅಪರಾಧಗಳನ್ನು ರಾಜಕಾರಣಿಗಳು, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನೇಹಾ ಹತ್ಯೆಯಾದಾಗ ನಾಡಿನ ರಾಜಕಾರಣಿಗಳು, ಸಿಎಂ, ಸಚಿವರು ಎಲ್ಲರೂ ಅವರಿಗೆ ಸಾಂತ್ವಾನ ಹೇಳಿದರು. ಆದರೆ, ಅಂಜಲಿ ಕುಟುಂಬದವರನ್ನು ಕೇಳುವವರು ದಿಕ್ಕಿಲ್ಲ. ಸರ್ಕಾರ ಆಡಳಿತ ಖಂಡಿಸಿ ಮೇ 18ರಂದು ಸಮುದಾಯದಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ನಮ್ಮ ಜಿಲ್ಲೆಯಿಂದ 500ಕ್ಕೂ ಹೆಚ್ಚು ಜನ ತೆರಳಲಿದ್ದೇವೆ. ಅಪರಾಧಿಗೆ ಕಠಿಣ ಶಿೆಯಾಗಬೇಕು ಎಂದು ಆಗ್ರಹಿಸಿದರು. ಸಮುದಾಯ ಮುಖಂಡರಾದ ಯಮನಪ್ಪ ಕಬ್ಬೇರ, ವೆಂಕಪ್ಪ ಬಾರಕೇರ, ಎನ್​.ಯಂಕಪ್ಪ, ಉದಯ ಕಬ್ಬೇರ, ರಾಜು ಕಲೆಗಾರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts