ಕೊಪ್ಪಳ: ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರನ್ನು ಸರ್ಕಾರ ಶುಕ್ರವಾರ ಏಕಾಏಕಿ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗದ ನಿರ್ದೇಶಕ ನಳಿನ್ ಅತುಲ್ ಅವರನ್ನು ನೇಮಿಸಿ ಆದೇಶಿಸಿದೆ.
2022ರ ಜುಲೈನಲ್ಲಿ ಸುಂದರೇಶ ಬಾಬು ಕೊಪ್ಪಳಕ್ಕೆ ಡಿಸಿಯಾಗಿ ಬಂದಿದ್ದರು. ಇಂದು ಬೆಳಗ್ಗೆ ಎಂದಿನಂತೆ ವಿಪತ್ತು ನಿರ್ವಹಣೆ ಪ್ರಾಧಿಕಾರ ಸಭೆ ನಡೆಸಲು ಸಿದ್ಧತೆ ನಡೆಸಿದ್ದರು. ಏಕಾಏಕಿ ವರ್ಗಾವಣೆ ಆದೇಶ ಬಂದಿದೆ. ಆದೇಶ ಪ್ರಕಟವಾಗುತ್ತಲೇ ನಳಿನ್ ಅತುಲ್ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಅಧಿಕಾರ ಹಸ್ತಾಂತರ ಮಾಡಿಕೊಂಡಿದ್ದಾರೆ.
ಸುಂದರೇಶ ಬಾಬು ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ. ಅತುಲ್ ಅವರು 2014ರ ಐಎಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ.