ಕೊನೇ ದಿನ 33 ನಾಮಪತ್ರ ಸಲ್ಲಿಕೆ

ನರಗುಂದ: ಪಟ್ಟಣದ ಪುರಸಭೆಗೆ ಮೇ 29ರಂದು ಜರುಗುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದ್ದರಿಂದ ಪಟ್ಟಣದ ವಿವಿಧ ವಾರ್ಡ್​ಗಳ ಅಭ್ಯರ್ಥಿಗಳಿಂದ ಒಟ್ಟು 33 ನಾಮಪತ್ರಗಳು ಸಲ್ಲಿಕೆಯಾಗಿವೆ. ಪುರಸಭೆಯ 23 ವಾರ್ಡ್​ಗಳಿಂದ ಒಟ್ಟು 64 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.

ವಾರ್ಡ್ ನಂ.1ರಲ್ಲಿ ಬಸೀರಸಾಬ್ ಕಿಲ್ಲೆದಾರ (ಕಾಂಗ್ರೆಸ್), ವಾರ್ಡ್ ನಂ.3- ದಿವಾನಸಾಬ್ ಕಿಲ್ಲೇದಾರ (ಪಕ್ಷೇತರ), ವಾರ್ಡ್ ನಂ.4 ರಾಜಪ್ಪ ರಂಗಣ್ಣವರ ಮತ್ತು ದೇವಪ್ಪ ಕಟ್ಟಿಮನಿ (ಕಾಂಗ್ರೆಸ್), ಬಸಪ್ಪ ಭಜಂತ್ರಿ(ಪಕ್ಷೇತರ) ನಾಮಪತ್ರ ಸಲ್ಲಿಸಿದರು.

ವಾರ್ಡ್ ನಂ.5 ರಲ್ಲಿ ರಾಜೀವ ಚಂದ್ರಪ್ಪ ಈಟಿ (ಪಕ್ಷೇತರ), ಬಸನಗೌಡ ಪಾಟೀಲ( ಕಾಂಗ್ರೆಸ್), ವಾರ್ಡ್ ನಂ. 6 ಬಿಜೆಪಿಯಿಂದ ರಾಜೇಶ್ವರಿ ಹವಾಲ್ದಾರ ಎರಡು ನಾಮಪತ್ರ, ಇಂದಿರಾಬಾಯಿ ಮಾನೆ (ಕಾಂಗ್ರೆಸ್), ವಾರ್ಡ್ ನಂ.7 ರಲ್ಲಿ ರಜೀಯಾಬೇಗಂ ತಹಸೀಲ್ದಾರ (ಬಿಜೆಪಿ), ವಾರ್ಡ್ ನಂ.8 ಶಾಂತಾ ಮಠಪತಿ (ಕಾಂಗ್ರೆಸ್), ವಾರ್ಡ್ ನಂ.9 ಗಂಗವ್ವ ಬೀದರಗಡ್ಡಿ (ಕಾಂಗ್ರೆಸ್), ಅನ್ನಪೂರ್ಣ ಪವಾರ (ಪಕ್ಷೇತರ), ವಾರ್ಡ್ ನಂ.10 ಪ್ರಕಾಶ ಹುಂಬಿ (ಪಕ್ಷೇತರ), ರಾಜಾರಾಮ್ ಮುಳಿಕ ( ಕಾಂಗ್ರೆಸ್), ವಾರ್ಡ್ ನಂ.11 ಫಕೀರಪ್ಪ ಸವದತ್ತಿ (ಕಾಂಗ್ರೆಸ್), ವಾರ್ಡ್ ನಂ.12 ರೇಣವ್ವ ಘಾಟಗೆ(ಕಾಂಗ್ರೆಸ್), ವಾರ್ಡ್ ನಂ.13 ಮೌಲಾಸಾಬ್ ಅರಬ ಜಮಾದಾರ (ಕಾಂಗ್ರೆಸ್), ವಾರ್ಡ್ ನಂ.14 ನಾಜೀರಹ್ಮದ ಖಾಜಿ (ಪಕ್ಷೇತರ) ನಾಮಪತ್ರ ಸಲ್ಲಿಸಿದರು.

ವಾರ್ಡ್ ನಂ.16 ದೇವರಾಜ ಕಲಾಲ (ಬಿಜೆಪಿ), ವಾರ್ಡ್ ನಂ.17 ರಲ್ಲಿ ಫಕೀರಪ್ಪ ಹಳೇಮನಿ (ಬಿಜೆಪಿ), ವಿಜಯ ಚಲವಾದಿ (ಕಾಂಗ್ರೆಸ್), ವಾರ್ಡ್ ನಂ.18 ಕವಿತಾ ಅರ್ಭಣದ (ಬಿಜೆಪಿ), ಹೇಮಾಕ್ಷಿ ದೊಡಮನಿ (ಕಾಂಗ್ರೆಸ್), ಪಕ್ಷೇತರರಾಗಿ ಉಮೇಶ ತಳವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ವಾರ್ಡ್ ನಂ.19 ಚನ್ನಪ್ಪಗೌಡ ಪಾಟೀಲ (ಬಿಜೆಪಿ), ವಾರ್ಡ್ ನಂ.21 ರಲ್ಲಿ ಹುಸೇನಸಾಬ್ ನನ್ನೇಸಾಬ್ ಗೋಟೂರ (ಬಿಜೆಪಿ), ಹನುಮಂತ ಲಮಾಣಿ (ಕಾಂಗ್ರೆಸ್), ವಾರ್ಡ್ ನಂ.22 ರಲ್ಲಿ ಯಲ್ಲವ್ವ ಕೊರವರ (ಕಾಂಗ್ರೆಸ್), ಫಕೀರವ್ವ ಮೂಲಿಮನಿ (ಪಕ್ಷೇತರ), ವಾರ್ಡ್ ನಂ.23 ಬಸವ್ವ ಮೇಟಿ (ಬಿಜೆಪಿ),ರಾಜೇಶ್ವರಿ ವೀರನಗೌಡ್ರ (ಕಾಂಗ್ರೆಸ್) ನಾಮಪತ್ರ ಸಲ್ಲಿಸಿದ್ದಾರೆ.

ಕೈ ಬಿಟ್ಟು ಕಮಲಕ್ಕೆ ಜೈ :17 ನೇ ವಾರ್ಡ್​ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೇ 15 ರಂದು ನಾಮಪತ್ರ ಸಲ್ಲಿಸಿದ್ದ ಶಿವಪ್ಪ ಭಜಂತ್ರಿ ಅವರಿಗೆ ಪಕ್ಷದಿಂದ ಬಿ, ಫಾಮ್ರ್ ನೀಡದ್ದರಿಂದ ಬೇಸತ್ತು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಗುರುವಾರ ಬೆಳಗ್ಗೆ ಶಾಸಕ ಸಿ.ಸಿ. ಪಾಟೀಲ ಅವರ ಪುತ್ರ ಉಮೇಶಗೌಡ ಪಾಟೀಲ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಜೆಡಿಎಸ್​ನಿಂದ ಅಭ್ಯರ್ಥಿಯಿಲ್ಲ :ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಪಟ್ಟಣದ 23 ವಾರ್ಡ್​ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ತಿಳಿಸಿದ್ದ ಜೆಡಿಎಸ್ ನಾಯಕರಿಗೆ ಕಳೆದ ಮೇ 13 ರಂದೇ ಪಕ್ಷದ ಅಭ್ಯರ್ಥಿಗಳಿಗಾಗಿ ಬಿ. ಫಾಮರ್್​ಗಳು ಸಿದ್ಧವಾಗಿ ಬಂದಿದ್ದವು. ಆದರೆ, ಸ್ಥಳೀಯ ನಾಯಕರ ಸಮನ್ವಯತೆ ಕೊರತೆಯಿಂದ ಯಾರೊಬ್ಬರೂ ಪಕ್ಷದ ಅಭ್ಯರ್ಥಿಯಾಗಲು ಮುಂದೆ ಬರಲಿಲ್ಲ. ದಿಢೀರನೇ ಬುಧವಾರ ಸಂಜೆ ಕೆಲವು ಪಕ್ಷೇತರ ಅಭ್ಯರ್ಥಿಗಳನ್ನು ಸಂರ್ಪಸಿ ನಮ್ಮ ಪಕ್ಷದಿಂದ ಬಿ ಫಾಮ್ರ್ ಪಡೆದು ನಾಮಪತ್ರ ಸಲ್ಲಿಸಿ ಚುನಾವಣೆಗೆ ಎಲ್ಲ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರೂ ಯಾರೂ ಮುಂದೆ ಬರಲಿಲ್ಲ.